News Karnataka Kannada
Sunday, May 05 2024
ಬೆಂಗಳೂರು ನಗರ

‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನನ್ನ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ’: ಪ್ರಕಾಶ್‌ ರಾಜ್‌

Actor posts old news clip criticising demonetisation
Photo Credit : Twitter

ಬೆಂಗಳೂರು: ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮವನ್ನು ಕರೊನಾ, ಡೆಂಗ್ಯೂಗೆ ಹೋಲಿಸಿದ ಬಳಿಕ ಹೇಳಿಕೆ ಪ್ರತಿಹೇಳಿಕೆಗಳಿಂದ ವಿವಾದ ತಾರಕಕ್ಕೇರಿದೆ. ಬಲಪಂಥೀಯ ಸಂಘಟನೆಗಳು ಸ್ಟಾಲಿನ್‌ ಹೇಳಿಕೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ ಅವರು ಸೋಮವಾರ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಸಾಂಕೇತಿಕ ‘ಶಿರಚ್ಛೇದ’ ನಡೆಸಿದ್ದರು. ಬಳಿಕ ಅವರ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಮಾತನಾಡಿದ್ದ ಆಚಾರ್ಯ, ಸ್ಟಾಲಿನ್ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂಪಾಯಿಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಈ ನಡುವೆ ನಟ ಪ್ರಕಾಶ್‌ ರಾಜ್‌ ಸನಾತನ ಧರ್ಮದ ಕುರಿತು ವ್ಯಂಗ್ಯವಾದ ಹೇಳಿಕೆಯನ್ನು ಎಕ್ಸ್‌ ನಲ್ಲಿ ಪ್ರಕಟಿಸಿದ್ದರು. ಅಂಬೇಡ್ಕರ್ ಮತ್ತು ಪೆರಿಯಾರ್ ಫೋಟೋಗಳನ್ನು ಶೇರ್ ಮಾಡುವುದರ ಜೊತೆಗೆ ಹಿಂದೂಗಳು ತನಾತನಿಸ್ ಅಲ್ಲ, ತನಾತನಿಸ್ ಮಾನವ ವಿರೋಧಿಗಳು ಎಂದು ಬರೆದುಕೊಂಡಿದ್ದರು.  ಸನಾತನಿಗಳನ್ನು ಗೇಲಿ ಮಾಡಲು ತನಾತನಿಸ್ ಎಂಬ ಪದ ಬಳಕೆ ಮಾಡಿದ್ದರು.

ಇದೀಗ ಮತ್ತೊಮ್ಮೆ ವಿವಾದದ ಮಾತುಗಳನ್ನಾಡಿದ್ದಾರೆ. ‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನನ್ನ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ’ ಎಂಬುದಾಗಿ ಪ್ರಶ್ನಿಸಿದವರಿಗೆ ತಿಳಿಸಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಟೌನ್ ಹಾಲ್​ನಲ್ಲಿ ನಡೆದ ಗೌರಿನೆನಪು ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ನಾನು ಟ್ವಿಟರ್​ನಲ್ಲಿ ‘ಸನಾತನಿ ಸಂಸತ್’ ಎಂದು ಪೋಸ್ಟ್​ ಮಾಡಿದ್ದೆ. ಅದಕ್ಕೆ, ‘ನೀನು ಸನಾತನ ಧರ್ಮ ಅಲ್ವಾ’ ಎಂದು ಒಬ್ಬ ಪ್ರಶ್ನೆ ಕೇಳಿದ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದೆ ಎಂದು ಪ್ರಕಾಶ್​ ರೈ ಹೇಳಿದ್ದಾರೆ.

ನಾನು ಧರ್ಮದ ವಿರುದ್ಧ ಅಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ. ಅವರು ಸಂಸತ್ ಭವನದ ಉದ್ಘಾಟನೆ ವೇಳೆ ಹೋಮ ಹವನ ಮಾಡಿಸಿದರು. ಅದು ನಮ್ಮ ಸಂಸತ್​​ ಭವನ. ಅದರಲ್ಲಿ ಹೋಮ ಹವನ ಮಾಡಬಾರದು. ಯಾವುದನ್ನೂ ಸಹ ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ, ಮೋದಿಯಿಂದ ಅದು ಆಗುತ್ತಿದೆ, ಅದಕ್ಕೆ ನನ್ನ ವಿರೋಧವಿದೆ ಎಂದು ಪ್ರಕಾಶ್ ರೈ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು