ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಸಂಜನಾ ಹಾಗೂ ರಾಗಿಣಿಗೆ ಕೋರ್ಟ್ ಜಾಮೀನು ನೀಡಿದ್ದು, ಇದೀಗ ಆದಿತ್ಯ ಆಳ್ವ ಅವರಿಗೂ ಜಾಮೀನು ನೀಡಿದೆ.
ಆದಿತ್ಯ ಆಳ್ವ ಸೇರಿದಂತೆ ಐವರು ಆರೋಪಿಗಳುಷಎನ್ ಡಿ ಪಿಎಸ್ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ಅದರ ವಿಚಾರಣೆ ನಡೆದು ಅವರಿಗೆ ಕೋರ್ಟ್ ಜಾಮೀನು ನೀಡಿದೆ. ಆದಿತ್ಯ ಆಳ್ವಾ ಅವರೊಂದಿಗೆ ರವಿಶಂಕರ್, ರಾಹುಲ್, ಆದಿತ್ಯ ಅಗರ್ವಾಲ್ ಮತ್ತು ವಿರೇನ್ ಖನ್ನಾಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.