ಬೆಂಗಳೂರು: ಸಿದ್ದರಾಮಯ್ಯ ಅವರೇ, ಗೋವನ್ನು ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ ಎಂದು ಹೇಳುವ ಮೊದಲು ನೀವೊಬ್ಬ ಹಿಂದು ಎನ್ನುವುದನ್ನು ಮರೆಯಬೇಡಿ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ ರೇಣುಕಾಚಾರ್ಯ ಮಾಜಿ ಸಿಎಂ ಸಿದ್ಧರಾಮಯ್ಯಗೆ ಬುದ್ಧಿ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವಂತ ಅವರು, ಸಿದ್ದರಾಮಯ್ಯ ಅವರೇ, ಗೋವನ್ನು ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ ಎಂದು ಹೇಳುವ ಮೊದಲು ನೀವೊಬ್ಬ ಹಿಂದು ಎನ್ನುವುದನ್ನು ಮರೆಯಬೇಡಿ ಅಂದಹಾಗೆ ನಿಮಗೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ ನಿಜವಾದ ಹಿಂದು ಗೋವನ್ನು ‘ಗೋಮಾತೆ’ ಎಂದು ಕರೆಯುವುದಲ್ಲದೇ ಗೋವನ್ನು ಪೂಜಿಸುತ್ತಾನೆ ಎಂಬುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರೇ,
ಗೋವನ್ನು ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ ಎಂದು ಹೇಳುವ ಮೊದಲು ನೀವೊಬ್ಬ ಹಿಂದು ಎನ್ನುವುದನ್ನು ಮರೆಯಬೇಡಿ
ಅಂದಹಾಗೆ ನಿಮಗೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ
ನಿಜವಾದ ಹಿಂದು ಗೋವನ್ನು “ಗೋಮಾತೆ” ಎಂದು ಕರೆಯುವುದಲ್ಲದೇ ಗೋವನ್ನು ಪೂಜಿಸುತ್ತಾನೆ.
— M P Renukacharya (@MPRBJP) May 22, 2022