ಬೆಂಗಳೂರು : ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ನಡವಳಿಕೆ, ರಾಜಕೀಯ ಭಾಷೆ ಗೊತ್ತಿಲ್ಲ. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆ ಎಂದು ಉಡಾಫೆಯಾಗಿ ಹೇಳುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಜಾಬ್ ಪ್ರತಿಭಟನೆ ವೇಳೆ ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದರು. ಇದಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಒಂದಲ್ಲ ಒಂದು ದಿನ ಕೆಂಪುಕೋಟೆ ಮೇಲೆ ನಾವು ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದರು. ಎಲ್ಲರೂ ಸಂವಿಧಾನದ ಮೇಲೆ ಪ್ರಮಾಣ ಮಾಡಿರ್ತಾರೆ. ಅಂತದ್ರಲ್ಲಿ ಮಂತ್ರಿ ಹೀಗೆ ಮಾತಾನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಶ್ವರಪ್ಪನವರಿಗೆ ನಡವಳಿಕೆ, ರಾಜಕೀಯ ಭಾಷೆ ಗೊತ್ತಿಲ್ಲ. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆ ಎಂದು ಉಡಾಫೆಯಾಗಿ ಹೇಳುತ್ತಾರೆ. ಸಚಿವರಾಗಿ ಧ್ವಜಕ್ಕೆ ಅಗೌರವ ಕೊಡುವುದು ಅಕ್ಷಮ್ಯ ಅಪರಾಧ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಲಿ ಆದರೆ ಅವರ ತಂದೆ ಬಗ್ಗೆ ಮಾತನಾಡುವುದು ತಪ್ಪು. ವೈಯಕ್ತಿಕವಾಗಿಯೂ ಯಾರೂ ಕೂಡ ಮಾತನಾಡಬಾರದು. ಅಂತ್ರದಲ್ಲಿ ಮಂತ್ರಿಯಾದವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.