ನವದೆಹಲಿ : 2022ರ ಐಪಿಎಲ್ ಋತುವಿಗಿಂತ ಮುಂಚಿತವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನನ್ನ ಹೆಸರಿಸಿದ್ದು, ಶ್ರೇಯಸ್ ಅಯ್ಯರ್ ಅವ್ರನ್ನ ಮುಂದಿನ ಕ್ಯಾಪ್ಟನ್ ಆಗಿ ನೇಮಿಸಲಾಗಿದೆ ಎಂದು ತಿಳಿಸಿದೆ. ಅಂದ್ಹಾಗೆ, ಕೆಲವು ದಿನಗಳ ಹಿಂದೆ ನಡೆದ ಐಪಿಎಲ್ 2022ರ ಹರಾಜಿನಲ್ಲಿ ಅಯ್ಯರ್ 12.25ಕೋಟಿ ರೂ.ಗಳಿಗೆ ಕೆಕೆಆರ್ ಸೇರಿಕೊಂಡರು.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಕೆಕೆಆರ್ʼನ ಸಿಇಒ ಮತ್ತು ಎಂಡಿ ವೆಂಕಿ ಮೈಸೂರು, ‘ಶ್ರೇಯಸ್ ಅಯ್ಯರ್ ಅವರನ್ನ ಕೋಲ್ಕತ್ತಾ ನೈಟ್ ರೈಡರ್ಸ್ʼನ ಹೊಸ ನಾಯಕರನ್ನಾಗಿ ಹೆಸರಿಸಲಾಗಿದೆ. ಮಾರ್ಚ್ ಕೊನೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದ್ದು, 15ನೇ ಆವೃತ್ತಿಗೆ ಮುಂಚಿತವಾಗಿ ಫ್ರಾಂಚೈಸಿ ಘೋಷಿಸಲಾಗಿದೆ. ಅವರು ಅತ್ಯುನ್ನತ ಮಟ್ಟದಲ್ಲಿ ಗುಣಮಟ್ಟದ ಬ್ಯಾಟ್ಸ್ ಮನ್ ಆಗಿದ್ದು, ಕೆಕೆಆರ್ʼನ ನಾಯಕರಾಗಿ ಉತ್ತಮ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ’ ಎಂದಿದ್ದಾರೆ.
🚨 Ladies and gentlemen, boys and girls, say hello 👋 to the NEW SKIPPER of the #GalaxyOfKnights
অধিনায়ক #ShreyasIyer @ShreyasIyer15 #IPL2022 #KKR #AmiKKR #Cricket pic.twitter.com/veMfzRoPp2
— KolkataKnightRiders (@KKRiders) February 16, 2022