News Karnataka Kannada
Friday, May 03 2024
ಬೆಂಗಳೂರು ನಗರ

ಯುವತಿಯ ಖಾಸಗಿ ಫೋಟೋವನ್ನು ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಹಾಕುವುದಾಗಿ ಬ್ಲ್ಯಾಕ್‌​ಮೇಲ್‌

Rape
Photo Credit :

ಬೆಂಗಳೂರು : ಯುವತಿಯ ಖಾಸಗಿ ಫೋಟೋ​ಗ​ಳನ್ನು ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಹಾಕುವುದಾಗಿ 3 ವರ್ಷಗಳಿಂದ ಬ್ಲ್ಯಾಕ್‌​ಮೇಲ್‌ ಮಾಡು​ತ್ತಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸ್‌ ಠಾಣೆ​ ಪೊಲೀಸರು ಬಂಧಿಸಿದ್ದಾರೆ. 19 ವರ್ಷ​ದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಈಕೆಯ ಸ್ನೇಹಿತರಾದ ದೇವಸಂದ್ರ ನಿವಾಸಿಗಳಾದ ಬ್ರಿಜ್‌ ಭೂಷಣ್‌ ಯಾದವ್‌ (21) ಮತ್ತು ವಿವೇಕ್‌ ರೆಡ್ಡಿ (20) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆ.ಆರ್‌.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ಆರೋಪಿ ಬ್ರಿಜ್‌ಭೂಷಣ್‌ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ಪದೇ ಪದೆ ಸಂತ್ರ​ಸ್ತೆಯ ಮನೆಗೆ ಬರು​ತ್ತಿದ್ದ. ಅನಂತರ ಯುವತಿ ಆರೋ​ಪಿ​ಯಿಂದ ಅಂತರ ಕಾಯ್ದು​ಕೊಂಡು, ಮಾತ​ನಾ​ಡು​ವು​ದನ್ನು ಬಿಟ್ಟಿ​ದ್ದರು. ಈ ನಡುವೆ ಆರೋಪಿ 2018ರಲ್ಲಿ ‘ನನ್ನ ಬಳಿ ನಿನ್ನ ಬೆತ್ತಲೆ ಫೋಟೋ​ಗ​ಳಿ​ವೆ. ಹಣ, ಚಿನ್ನಾ​ಭ​ರಣ ಕೊಡ​ದಿ​ದ್ದ​ರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋ​ಗ​ಳನ್ನು ಹಾಕು​ತ್ತೇನೆ’ ಎಂದು ಬೆದ​ರಿ​ಕೆ​ಯೊ​ಡ್ಡುತ್ತಿದ್ದ.

ಇದರಿಂದ ಆತಂಕಗೊಂಡ ಯುವತಿ ಮನೆ​ಯ​ಲ್ಲಿದ್ದ 218 ಗ್ರಾಂ ಚಿನ್ನಾ​ಭ​ರಣ, 75 ಸಾವಿರ ರು. ನಗದು ಕೊಟ್ಟಿ​ದ್ದರು. ಯುವತಿಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದ ಬ್ರಿಜ್‌ ಭೂಷಣ್‌ನ ಸ್ನೇಹಿತ ವಿವೇಕ್‌ ರೆಡ್ಡಿ 2019ರಲ್ಲಿ ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಚಾಟ್‌ ಮಾಡುತ್ತಿದ್ದ. ಬಳಿಕ ರಾಚೇ​ನ​ಹಳ್ಳಿ ಕೆರೆ ಬಳಿ ಕರೆ​ಸಿ​ಕೊಂಡು ಅಸ​ಭ್ಯ​ವಾಗಿ ನಡೆ​ದು​ಕೊ​ಳ್ಳು​ತ್ತಿದ್ದ. ಒಮ್ಮೆ ಕರೆ ಮಾಡಿ ‘ನಿನ್ನ ಖಾಸಗಿ ಫೋಟೋ’ ಇದೆ ಎಂದು ಬೆದರಿಸಿ,

ಹಣ, ಒಡ​ವೆ ಕೊಡದಿದ್ದರೆ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡು​ತ್ತೇ​ನೆ ಎಂದು ಬೆದರಿಸಿದ್ದ. ಇದ​ರಿಂದ ಹೆದರಿದ ಸಂತ್ರಸ್ತೆ,​ ತ​ನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿ​ದ್ದರು. ಆದರೂ ಆರೋಪಿ​ಗಳು ಪದೇ ಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡು​ತ್ತಿದ್ದರು. ಇದ​ರಿಂದ ಬೇಸತ್ತ ಸಂತ್ರಸ್ತೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು