News Karnataka Kannada
Sunday, April 28 2024
ಬೆಂಗಳೂರು ನಗರ

ಬೆಂಗಳೂರು: ಡೆತ್ ನೋಟು ಬರೆದಿಟ್ಟು ರೈಲಿಗೆ ತಲೆಕೊಟ್ಟ ವಿದ್ಯಾರ್ಥಿನಿ

Track
Photo Credit :

ಬೆಂಗಳೂರು:  ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಗರದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯ ಶಾಲೆಯ ಪ್ರಾಂಶುಪಾಲರು ಸೇರಿ ಕೆಲವರ ವಿರುದ್ಧ ಡೆತ್‌ನೋಟ್‌ ಬರೆದಿಟ್ಟು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ನಡೆದಿದೆ.

ಟಿ.ದಾಸರಹಳ್ಳಿ ನಿವಾಸಿ ಕೆ.ಎಸ್‌.ರಮ್ಯಾ ಮೂರ್ತಿ (15) ಮೃತ ವಿದ್ಯಾರ್ಥಿನಿ.ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಮ್ಯಾ ತಂದೆ ಆಂಗ್ಲಮುದ್ರಣ ಮಾಧ್ಯಮದಲ್ಲಿ ಪೇಜ್‌ ಡಿಸೈನರ್‌ ಆಗಿದ್ದು, ತಾಯಿ ಶಿಕ್ಷಕಿಯಾಗಿದ್ದಾರೆ.

ಟಿ.ದಾಸರಹಳ್ಳಿಯಲ್ಲಿರುವ ಖಾಸಗಿ ಶಾಲೆಯಲ್ಲಿ ರಮ್ಯಾ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಐದಾರು ತಿಂಗಳ ಹಿಂದೆ ರಮ್ಯಾ ಶಾಲೆಗೆ ಸ್ನ್ಯಾಕ್ಸ್‌ ತೆಗೆದುಕೊಂಡು ಹೋಗಿದ್ದು, ಅದಕ್ಕೆ ಶಾಲಾ ಆಡಳಿತ ಮಂಡಳಿ ಆಕ್ಷೇಪಿಸಿ, ಆಕೆಯ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಅದರಿಂದ ಬೇಸರಗೊಂಡ ಆಕೆಯ ತಾಯಿ ಮಾನವ ಹಕ್ಕುಗಳಿಗೆ ಶಾಲೆ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದರು. ಅದೇ ವಿಚಾರಕ್ಕೆ ಇದೀಗ ಶಾಲೆಯ ಪ್ರಾಂಶುಪಾಲರು ಸೇರಿ ಕೆಲವರು ಆಕೆಗೆ ಕಿರುಕುಳ ನೀಡುತ್ತಿದ್ದರು. ಅದರಿಂದ ಬೇಸರಗೊಂಡ ಆಕೆ ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗುವಾಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು