ಜೈಪುರ : 18 ವರ್ಷದ ಬಾಲಕಿಯೊಬ್ಬಳು ಶುಕ್ರವಾರ (ಫೆಬ್ರವರಿ 18) ನಗರದ ಸೋಡಾಲಾ ಪ್ರದೇಶದಲ್ಲಿ ತನ್ನ ಜನ್ಮದಿನದಂದು ಹೊಸ ಮೊಬೈಲ್ ಫೋನ್ ಕೊಡಿಸದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
12 ನೇ ತರಗತಿಯ 18 ವರ್ಷದ ವಿದ್ಯಾರ್ಥಿನಿ ಫೆಬ್ರವರಿ 13ರಂದು ತನ್ನ ಜನ್ಮದಿನವನ್ನು ಆಚರಿಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ, ಅವಳು ಪಬ್ ಜಿ ಆಡಲು ತನ್ನ ಹೆತ್ತವರಿಂದ ಮೊಬೈಲ್ ಫೋನ್ ಗೆ ಬೇಡಿಕೆ ಇಟ್ಟಳು. ಅವಳ 12 ನೇ ತರಗತಿ ಪರೀಕ್ಷೆಗಳು ಮುಗಿದ ನಂತರ ಹೊಸ ಫೋನ್ ಖರೀದಿಸುವ ಭರವಸೆಯನ್ನು ಅವಳ ತಂದೆ ನೀಡಿದರು.’ ಹೊಸ ಮೊಬೈಲ್ ಫೋನ್ ಕೊಡಿಸದ ಕಾರಣದಿಂದ ಬೇಸತ್ತು ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಪೊಲೀಸರು ಮಾಹಿತಿ ನೀಡಿದ್ದಾರೆ