ಬೆಂಗಳೂರು: ಇಲ್ಲಿ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಲು ನಿನ್ನೆ ಸಂಜೆ ವೇಳೆಗೆ ರಫೇಲ್ ಯುದ್ಧ ವಿಮಾನಗಳು ಇಲ್ಲಿಗೆ ಬಂದಿಳಿದಿವೆ.
ಫ್ರಾನ್ಸ್ ನ ಡಸ್ಟಾಲ್ ಕಂಪೆನಿಯ ಮೂರು ರಫೇಲ್ ವಿಮಾನಗಳು ಈಗಾಗಲೇ ನಗರಕ್ಕೆ ಬಂದಿವೆ. ಇಲ್ಲಿನ ಬಳ್ಳಾರಿ ರಸ್ತೆಯ ಯಲಹಂಕ ಸುತ್ತಮುತ್ತಲಿನ ಪ್ರದೇಶದಲ್ಲಿ ಯುದ್ಧ ವಿಮಾನಗಳ ಭಾರೀ ಸದ್ದು ಕೇಳಿಸುತ್ತಿದೆ.
ಫೆ.18 ಮತ್ತು 19ರಂದು ಜಕ್ಕೂರು ಏರೋಡ್ರಮ್ ನಲ್ಲಿ ಪ್ರಾಥಮಿಕ ಹಂತದ ಸ್ಪರ್ಧೆ ನಡೆಯಲಿದೆ. ಫೆ.21ರಂದು ಅಂತಿಮ ಹಂತದ ಸ್ಪರ್ಧೆಯು ಯಲಹಂಕದ ವಾಯುನೆಲೆಯಲ್ಲಿ ನಡೆಯಲಿದೆ.