ಬೆಂಗಳೂರು: ಬೃಹತ್ ಮಟ್ಟದ ಖೋಟಾ ನೋಟು ಜಾಲವನ್ನು ಸಿಸಿಬಿ ಪೊಲೀಸರು ಶನಿವಾರ ಬೇಧಿಸಿದ್ದಾರೆ.
ಈ ಜಾಲದಲ್ಲಿದ್ದ ಕ್ಯಾಮರೋನ್ ದೇಶದ ಪ್ರಜೆಯನ್ನು ಬಂಧಿಸಲಾಗಿದೆ. ಆರೋಪಿಯಿಂದ 200 ರೂ. ಮುಖಬೆಲೆಯ 33 ಲಕ್ಷ ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ.
ಈ ಜಾಲದ ಹಿಂದೆ ಇನ್ನೂ ಹಲವಾರು ಮಂದಿ ಇರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.