News Karnataka Kannada
Sunday, April 28 2024
ಬೆಂಗಳೂರು ನಗರ

ಜನರ ಆಶಯ ಸಾಕಾರಗೊಳಿಸುವುದು ಜನಪ್ರತಿನಿಧಿಗಳ ಕರ್ತವ್ಯ : ಜೆ. ಸಿ. ಮಧುಸ್ವಾಮಿ

Session
Photo Credit :

ಬೆಂಗಳೂರು: ಜನರ ನಿರೀಕ್ಷೆಯನ್ನು ಕಾನೂನು ಚೌಕಟ್ಟಿನಲ್ಲಿ ಹಣಕಾಸಿನ ಮಿತಿಯೊಳಗೆ ಸಾಕಾರಗೊಳಿಸುವುದು ಎಲ್ಲ ಜನಪ್ರತಿನಿಧಿಗಳ ಆದ್ಯ ಕರ್ತವ್ಯವೆಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ. ಸಿ. ಮಧುಸ್ವಾಮಿ ತಿಳಿಸಿದರು

ವಿಕಾಸಸೌಧದಲ್ಲಿ ಮಾನ್ಯ ಶಾಸಕರುಗಳಿಗೆ ಹಮ್ಮಿಕೊಳ್ಳಲಾದ ಎರಡು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಜನಪ್ರತಿನಿಧಿಗಳಿಗೆ ಜನರ ಸೇವೆ ಮಾಡಲು ಒಂದು ಸದಾವಕಾಶ ಸಿಕ್ಕಿದೆ ಇದನ್ನು ಇವರು ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸಿ ಜನರ ನಿರೀಕ್ಷೆಯನ್ನು ತಲುಪಬೇಕು ಅಧಿವೇಶನದಲ್ಲಿ ನಡೆಯುವ ಚರ್ಚೆ ವಾದಗಳನ್ನು ಸ್ವೀಕರಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಬೇಕು ಅಲ್ಲದೆ ನಿಖರ ವಿಷಯ ಹಾಗೂ ಮಾಹಿತಿಯೊಂದಿಗೆ ಸದನಕ್ಕೆ ಆಗಮಿಸಿ ವಿಷಯ ಮಂಡನೆ ಮಾಡಬೇಕು.  ಸದನದ ಘನತೆಯನ್ನು ಉಭಯ ಸದನಗಳ ಸದಸ್ಯರು ಕಾಪಾಡಿಕೊಳ್ಳಬೇಕು.ನಾಯಕತ್ವ ಟೊಳ್ಳಾದರೆ ಆದರೆ ಇಡೀ ವ್ಯವಸ್ಥೆ ಟೊಳ್ಳಾದಂತೆ.  ಶಾಸನ ರಚನೆಯನ್ನು ವಿವೇಚನೆಯಿಂದ ಅಭಿವೃದ್ಧಿಗೆ ಪೂರಕವಾಗಿ ಮಾಡಬೇಕು. ಎಲ್ಲರೂ ರಾಜ್ಯದ ಹಿತಾಸಕ್ತಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಗೆ ಆಯ್ಕೆಯಾದ ಪ್ರತಿಯೊಬ್ಬ ಸದಸ್ಯರು ಕಲಾಪಗಳಲ್ಲಿ ತಪ್ಪದೇ ಭಾಗವಹಿಸಬೇಕು.ಅಧಿವೇಶನದಲ್ಲಿ ಇರಬೇಕಾದ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು.ಲೆಕ್ಕಪತ್ರಗಳು ಬಜೆಟ್ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದರೆ ಉತ್ತಮ ಆಡಳಿತ ನಡೆಸಲು ಸಾಧ್ಯ.ಶಾಸಕರುಗಳಿಗೆ ಇಂದು ಮತ್ತು ನಾಳೆ ಎರಡು ದಿನಗಳು ತರಬೇತಿ ಶಿಬಿರ ನಡೆಯಲಿದೆ, ಈ ಶಿಬಿರದಲ್ಲಿ ಚುನಾಯಿತರಾದ ಎಲ್ಲಾ ಶಾಸಕರು ತಪ್ಪದೆ ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿ, ವಿಧೇಯಕಗಳು ಹಾಗೂ ವಿತ್ತೀಯ ಕಲಾಪಗಳ ಬಗ್ಗೆ ಬೆಳಕು ಚೆಲ್ಲಿದರು ಅಲ್ಲದೆ ರಾಜ್ಯದ ಅಭಿವೃದ್ಧಿಯ ಪಾಲುದಾರನಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪಾತ್ರದ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ,  ಮಾಜಿ ಸಭಾಪತಿಗಳಾದ ಡಿಎಚ್ ಶಂಕರಮೂರ್ತಿ, ಮಾಜಿ ಸಭಾಪತಿಗಳಾದ ಬಿ.ಎಲ್ ಶಂಕರ್,  ಶಾಸಕರಾದ ಕೆ.ಆರ್. ರಮೇಶ್ ಕುಮಾರ್, ಕೆ. ಟಿ. ಶ್ರೀಕಂಠೇಗೌಡ ಮಾಜಿ ಶಾಸಕರಾದ   ಗೋ ಮಧುಸೂದನ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು