News Karnataka Kannada
Friday, May 03 2024
ಬೆಂಗಳೂರು ನಗರ

ಕೊರೊನಾ ಪರೀಕ್ಷೆಗೆ ಒಳಪಟ್ಟವರು ಹೊರಗೆ ಅಡ್ಡಾಡುವಂತಿಲ್ಲ, ಕೆಲಸಕ್ಕೂ ಹಾಜರಾಗುವಂತಿಲ್ಲ

Vidhana Soudha
Photo Credit : IANS

ಬೆಂಗಳೂರು : ಕೊರೊನಾ ಪರೀಕ್ಷೆಗೆ ಒಳಪಟ್ಟವರು ಕಡ್ಡಾಯವಾಗಿ ಹೊರಗೆ ಅಡ್ಡಾಡುವಂತಿಲ್ಲ, ಕೆಲಸಕ್ಕೂ ಹಾಜರಾಗುವಂತಿಲ್ಲ, ವರದಿ ಬರುವವರೆಗೂ ಹೋಮ್ ಐಸೋಲೇಷನ್ ನಲ್ಲಿರಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಐಸೋಲೇಷನ್ ಕ್ವಾರಂಟೈನ್ ನಲ್ಲಿರುವವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರೆ ಅವರು ವರದಿ ಬರುವವರೆಗೂ ಹೋಮ್ ಐಸೋಲೇಷನ್ ನಲ್ಲಿ ಇರಬೇಕು. ಹೊರಗೆ ಅಡ್ಡಾಡುವಂತಿಲ್ಲ, ಕೋವಿಡ್ ವರದಿ ಬರುವವರೆಗೆ ಕೆಲಸಕ್ಕೆ ಕೂಡ ಹಾಜರಾಗುವಂತಿಲ್ಲ.ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇನ್ನೂ, ರಾಜ್ಯದಲ್ಲಿ ಮತ್ತೆ ಇಂದು ಕೊರೋನಾ  ಮಹಾಸ್ಪೋಟವೇ ಉಂಟಾಗಿದೆ. ಬೆಂಗಳೂರಿನಲ್ಲಿ 22,284 ಸೇರಿದಂತೆ ರಾಜ್ಯಾಧ್ಯಂತ 32,793 ಜನರಿಗೆ ಕೋವಿಡ್ ಪಾಸಿಟಿವ್  ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್  ಅವರು ಮಾಹಿತಿ ನೀಡಿದ್ದು, ಇದೇ ವೇಳೆ ಅವರು ಕಳೆದ 24 ಗಂಟೆಯಲ್ಲಿ 2,18,479 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಅಂತ ತಿಳಿಸಿದ್ದಾರೆ.

ಇವರಲ್ಲಿ ಬೆಂಗಳೂರಿನಲ್ಲಿ 22,284 ಸೇರಿದಂತೆ ರಾಜ್ಯದಲ್ಲಿ 32,793ಜನರಿಗೆ ಕೋವಿಡ್ ದೃಢಪಟ್ಟಿರೋದಾಗಿ ತಿಳಿಸಿದ್ದಾರೆ. ಇಂದು ರಾಜ್ಯದಲ್ಲಿ 32,793 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ ಶೇ. 15%ಕ್ಕೆ ಏರಿಕೆಯಾಗಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ 1,69,850ಕ್ಕೆ ಏರಿಕೆಯಾಗಿವೆ ಎಂದು ತಿಳಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 4,273 ಜನರು ಗುಣಮುಖರಾಗಿದ್ದಾರೆ. ಸೋಂಕಿನಿಂದಾಗಿ ಬೆಂಗಳೂರಿನಲ್ಲಿ 05 ಜನರು ಸೇರಿದಂತೆ 07 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು