News Karnataka Kannada
Saturday, May 04 2024
ಬೆಂಗಳೂರು ನಗರ

ಕೇಂದ್ರದಿಂದ ಮಕ್ಕಳ ವ್ಯಾಕ್ಸಿನೇಷನ್ ಮಾರ್ಗಸೂಚಿ ಬಿಡುಗಡೆ

Covaxin
Photo Credit :

ಬೆಂಗಳೂರು, ಡಿ.28 : ಮಕ್ಕಳ ಲಸಿಕೆ ಕುರಿತು ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಎಲ್ಲ ಫಲಾನುಭವಿಗಳಿಗೆ ಕೋವ್ಯಾಕ್ಸಿನ್ ಮಾತ್ರ ನೀಡಲಾಗುತ್ತದೆ. ಜ.3 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸಲಾಗುವುದು. ಕೇಂದ್ರದಿಂದ ಮಕ್ಕಳ ವ್ಯಾಕ್ಸಿನೇಷನ್ ಮಾರ್ಗಸೂಚಿ ಬಿಡುಗಡೆಯಾಗಿದೆ.

ಆದ್ಯತೆ ಮೇರೆಗೆ ಆರೋಗ್ಯ ಇಲಾಖೆ ಲಸಿಕೆಯನ್ನು ನೀಡಲಿದೆ. ಫಲಾನುಭವಿಗಳು ಕೋವಿನ್ ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆನ್‍ಲೈನ್‍ನಲ್ಲಿ ನೋಂದಣಿ ಮತ್ತು ಅಪಾಯಿಂಟ್‍ಮೆಂಟ್ ಪಡೆಯಬಹುದು.

ಇದರ ಜತೆಗೆ ಎರಡು ಡೋಸ್ ಲಸಿಕೆ ಪಡೆದಿರುವ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್‍ಲೈನ್ ವರ್ಕರ್ಸ್‍ಗೂ ಮೂರನೆ ಡೋಸ್ ಲಸಿಕೆಯನ್ನು ಜನವರಿ 10ರಿಂದ ಪ್ರಾರಂಭಿಸಲಾಗುವುದು.

ಎರಡನೆ ಡೋಸ್ ಪಡೆದ ದಿನಾಂಕದಿಂದ 39 ವಾರಗಳ ಬಳಿಕ ಅಂದರೆ 9 ತಿಂಗಳ ಬಳಿಕ ಮೂರನೆ ಡೋಸ್ ಪಡೆಯಬಹುದಾಗಿದೆ. ಈಗಾಗಲೇ 9 ತಿಂಗಳಾಗಿದ್ದು ಪ್ರಥಮ ಹಂತವಾಗಿ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್‍ಲೈನ್ ವರ್ಕರ್ಸ್‍ಗೆ ಮೂರನೆ ಡೋಸ್ ನೀಡಲು ಸಿದ್ಧತೆ ನಡೆದಿದೆ.

ಇತರ ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆ ಮೇರೆಗೆ ಲಸಿಕೆ ಪಡೆಯಬಹುದು. ಇವರೆಲ್ಲರೂ ಸರ್ಕಾರದಿಂದ ನೀಡುವ ಉಚಿತ ಲಸಿಕೆಗೆ ಅರ್ಹರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು