ಪುಷ್ಪ ಸಿನಿಮಾದ ಐಟಂ ಸಾಂಗ್ನಲ್ಲಿ ಸಮಂತಾ ಸಿಕ್ಕಾಪಟ್ಟೆ ಮಿಂಚಿದ್ದು, ನಂ. 1 ಪಟ್ಟಕ್ಕೇರಿದ್ದಾರೆ. ಪುಷ್ಪ ಸಿನಿಮಾದ ಎಲ್ಲ ಹಾಡುಗಳಿಗಿಂತ ಸಮಂತಾ ಅಭಿನಯದ ಐಟಂ ಸಾಂಗ್ ಫೇಮಸ್ ಆಗಿದ್ದು, ಸದ್ಯ ಯೂಟ್ಯೂಬ್ನಲ್ಲಿ ನಂ,1 ಸ್ಥಾನದಲ್ಲಿದೆ.
2021ರಲ್ಲಿ ಎಚ್ಚು ಸದ್ದು ಮಾಡಿದ ಹಾಡುಗಳಲ್ಲಿ ಸಮಂತಾ ಹೆಜ್ಜೆ ಹಾಕಿದ ಊ ಅಂಟಾವಾ ಹಾಡು ನಂ.1 ಸ್ಥಾನದಲ್ಲಿದೆ. ಅತಿ ಹೆಚ್ಚು ಮಂದಿ ಈ ಹಾಡನ್ನು ಮುಗಿಬಿದ್ದು ನೋಡಿದ್ದಾರೆ. ಅತಿವೇಗವಾಗಿ ಹೆಚ್ಚು ವ್ಯೂಸ್ ಪಡೆದ ಶ್ರೇಯ ಕೂಡ ಈ ಹಾಡಿಗೆ ಸೇರಲಿದೆ.
ಯೂಟ್ಯೂಬ್ ಟ್ರೆಂಡ್ ಮತ್ತು ಜನರ ಆಯ್ಕೆ ಅನ್ವಯ ಈ ಹಾಡನ್ನು ನಂ.1 ಎಂದು ಹೇಳಲಾಗಿದೆ. ಈ ಸುದ್ದಿಯನ್ನು ಖುದ್ದು ಸಮಂತಾ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.