ಬೆಂಗಳೂರು : ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಟ್ವೀಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಲಾಗಿದೆ.ಈ ಕುರಿತು ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ನನ್ನ ಟ್ವಿಟರ್ ಖಾತೆಯು ಇದ್ದಕ್ಕಿದ್ದಂತೆ ನಿಷ್ಕ್ರೀಯವಾಗಿದೆ, ನಾನು ನನ್ನ ಖಾತೆಯನ್ನು ತೆರೆಯಲು ಸಾಧ್ಯವಾಗದ ರೀತಿಯಲ್ಲಿ ನಿಯಂತ್ರಣ ತಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದು ಟ್ವಿಟರ್ ಸಂಸ್ಥೆಯವರಿಂದಾಗಿದೆಯೋ ಅಥವಾ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರೂ ಎಂದು ಇನ್ನೂ ನನಗೆ ತಿಳಿದಿಲ್ಲ, ಟ್ವಿಟರ್ ಸಂಸ್ಥೆಯಿಂದ ಈ ರೀತಿಯಾಗಿದ್ದರೆ ನನಗೆ ಸೂಚನೆ ನೀಡಲಾಗುತ್ತಿತ್ತು ಎಂದು ತಿಳಿದಿದ್ದೇನೆ, ಆದರೆ ಇದುವರೆಗೂ ನನಗೆ ಯಾವುದೇ ರೀತಿಯ ಸೂಚನೆಗಳು ಬಂದಿರದ ಕಾರಣ ಹ್ಯಾಕ್ ಆಗಿರಬಹುದು ಎನಿಸುತ್ತಿದೆ ಎಂದಿದ್ದಾರೆ
ನನ್ನ ಟ್ವಿಟರ್ ಖಾತೆಯು ನನ್ನ ನಿಯಂತ್ರಣಕ್ಕೆ ಸಿಗುವವರೆಗೂ ಅದರಲ್ಲಿ ಯಾವುದೇ ಬಗೆಯ ಅಸಂಬದ್ಧ, ಅಪ್ರಬುದ್ದ ಪೋಸ್ಟ್ಗಳು ಕಂಡುಬಂದಲ್ಲಿ ಅದು ನನ್ನದಾಗಿರುವುದಿಲ್ಲ ಮಾಹಿತಿ ನೀಡಿದ್ದಾರೆ.