ಬೆಂಗಳೂರು (ಡಿ. 06): ಒಮಿಕ್ರೋನ್ ವೈರಸ್ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆ, ಭಾನುವಾರ ಒಂದೇ ದಿನ ಭಾರತದಲ್ಲಿ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಸೋಂಕಿತ ವೈದ್ಯರೊಬ್ಬರ ಸಂಪರ್ಕದಲ್ಲಿದ್ದ ಐವರ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿ ಇಂದು ಬರಲಿದೆ.
‘ಸೋಂಕಿತ ವೈದ್ಯರ ಸಂಪರ್ಕದಲ್ಲಿದ್ದ ಐವರಲ್ಲಿ ಯಾವುದೇ ಲಕ್ಷಣಗಳಿಲ್ಲ. ತೀವ್ರತೆ, ಸಮಸ್ಯೆ ಕಂಡು ಬಂದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಮಾಧಾನಕರ ವಿಚಾರ. ಅವರು 2 ಡೋಸ್ ತೆಗೆದುಕೊಂಡಿದ್ದಾರೆ. 2 ಡೋಸ್ ತೆಗೆದುಕೊಂಡವರಿಗೆ ತೀವ್ರತೆ ಕಡಿಮೆ ಇರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಲ್ಲರೂ 2 ಡೋಸ್ ಹಾಕಿಸಿಕೊಳ್ಳಿ’ ಎಂದು ಡಾ. ಸುಧಾಕರ್ ಹೇಳಿದ್ದಾರೆ.