ಬೆಂಗಳೂರು : ಹಳೆ ಮೈಸೂರು ಭಾಗದ ಜನತೆಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸೋಮವಾರ ಸಿಹಿಸುದ್ದಿ ನೀಡಿದ್ದಾರೆ.
ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು-ಮೈಸೂರು ಹೈವೇ ಪೂರ್ಣಗೊಳ್ಳಲಿದೆ ಎಂದು ಅವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು-ನಿಡಘಟ್ಟ-ಮೈಸೂರು 117 ಕಿಮೀ ಉದ್ದದ ರಸ್ತೆಯನ್ನು 8,350 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆ ನಿರ್ಮಾಣ ಕಾರ್ಯವು ಮುಕ್ತಾಯದ ಹಂತದಲ್ಲಿದ್ದು, ಅಕ್ಟೋಬರ್ 2022ರೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹೆದ್ದಾರಿ ಯೋಜನೆ ಪೂರ್ಣಗೊಂಡರೆ ಬೆಂಗಳೂರು- ಮೈಸೂರು ಮಧ್ಯೆ ಇರುವ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಪ್ರಯಾಣದ ಅವಧಿ ತಗ್ಗುತ್ತದೆ. ಇದರಿಂದ ಬೆಂಗಳೂರಿನ ಮೇಲಿನ ವಾಸ್ತವ್ಯದ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.
The Bengaluru – Nidaghatta – Mysuru section of NH-275 is a 10-Lane, 117 km long stretch in the State of Karnataka. It is being developed at a cost of ₹ 8,350 Cr. The construction work is nearing completion and will be completed by October 2022. #PragatiKaHighway #GatiShakti pic.twitter.com/y3b3ASAIa6
— Nitin Gadkari (@nitin_gadkari) March 28, 2022