ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ದಾಸರಹಳ್ಳಿಯಲ್ಲಿರುವ ರಾಕ್ ಲೈನ್ ಮಾಲ್ಗೆ ಬಿಬಿಎಂಪಿ ಬೀಗ ಜಡಿದಿದೆ.
ದಾಸರಹಳ್ಳಿ ವಲಯದ ಕಂದಾಯ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿ ತೆರಳಿದ್ದಾರೆ. ಪೊಲೀಸರು ಹಾಗೂ ಮಾರ್ಷಲ್ಸ್ ಸಮ್ಮುಖದಲ್ಲಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಹಲವು ವರ್ಷದಿಂದ ರಾಕ್ಲೈನ್ ಮಾಲ್ ಕೋಟ್ಯಾಂತರ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಹಲವು ಬಾರಿ ನೋಟಿಸ್ ನೀಡಿದ್ದರೂ ತೆರಿಗೆ ಹಣವನ್ನು ನೀಡಿಲ್ಲ ಎನ್ನಲಾಗಿದೆ.
ರಾಕ್ಲೈನ್ ಮಾಲ್ 2011 ರಿಂದ 2022-23 ರವರೆಗೆ ಒಟ್ಟು 11.51 ಕೋಟಿ ತೆರಿಗೆ ಬಾಕಿ ಇದೆಯಂತೆ. ಬಾಕಿ ತೆರಿಗೆ ಪಾವತಿಸಲು ಡಿಮ್ಯಾಂಡ್ ನೋಟೀಸ್ ನೀಡಿದ್ದರೂ ತೆರಿಗೆ ಪಾವತಿಸಿಲ್ಲ.
ದಾಸರಹಳ್ಳಿ ವಲಯ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತರಾದ ಬಾಲಶೇಖರ್, ದಾಸರಹಳ್ಳಿ ವಲಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾರ್ಷಲ್ ಸ್ಥಳದಲ್ಲಿದ್ದರು.