News Karnataka Kannada
Thursday, April 18 2024
Cricket
ಬಾಲಿವುಡ್

ನೌಕಾಪಡೆ ಅಧಿಕಾರಿಗಳ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ: ಶಾರುಖ್ ಖಾನ್

ನೌಕಪಡೆ ಅಧಿಕಾರಿಗಳ ಬಿಡುಗಡೆ ವಿಚಾರದಲ್ಲಿ ಪ್ರಧಾನಿ ಮೋದಿ ಬದಲಾಗಿ, ನಟ ಶಾರುಖ್‌ ಖಾನ್‌ ಪಾತ್ರವಿದೆ ಎಂದೆಲ್ಲ ಸುದ್ದಿಗಳು ಹರಿದಾಡಿತ್ತು. ಆದರೆ ಈ ಸುದ್ದಿಗಳನ್ನು ಅಲ್ಲೆಗೆಳದಿರುವ ನಟ ಶಾರುಖ್‌ ಖಾನ್‌ ಇದರಲ್ಲಿ ಪಾತ್ರವಿಲ್ಲ ಎಂಬುದನ್ನು ಸ್ಪಷ್ಠಪಡಿಸಿದ್ದಾರೆ.
Photo Credit : News Kannada

ಮುಂಬೈ: ನೌಕಪಡೆ ಅಧಿಕಾರಿಗಳ ಬಿಡುಗಡೆ ವಿಚಾರದಲ್ಲಿ ಪ್ರಧಾನಿ ಮೋದಿ ಬದಲಾಗಿ, ನಟ ಶಾರುಖ್‌ ಖಾನ್‌ ಪಾತ್ರವಿದೆ ಎಂದೆಲ್ಲ ಸುದ್ದಿಗಳು ಹರಿದಾಡಿತ್ತು. ಆದರೆ ಈ ಸುದ್ದಿಗಳನ್ನು ಅಲ್ಲೆಗೆಳದಿರುವ ನಟ ಶಾರುಖ್‌ ಖಾನ್‌ ಇದರಲ್ಲಿ ಪಾತ್ರವಿಲ್ಲ ಎಂಬುದನ್ನು ಸ್ಪಷ್ಠಪಡಿಸಿದ್ದಾರೆ.

ಕಳೆದ ದಿನವಷ್ಟೇ ಕತಾರ್ ನಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ 8 ಮಂದಿ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿತ್ತು. ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಕತಾರ್ ಈ ಕೆಲಸ ಮಾಡಿತ್ತು. ಆದರೆ ನೌಕಾ ಪಡೆ ಅಧಿಕಾರಿಗಳ ಬಿಡುಗಡೆ ಹಿಂದೆ ಶಾರುಖ್ ಖಾನ್ ಪಾತ್ರವಿದೆ ಎಂದು ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ ಬಾಲಿವುಡ್ ನಟ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಇಲ್ಲಿಗೆ ಶಾರುಖ್ ಖಾನ್ ಭೇಟಿ ನೀಡಿದ್ದರು. ಈ ವೇಳೆ ಶಾರುಖ್ ಈ ಅಧಿಕಾರಿಗಳನ್ನು ಬಿಡುಗಡೆ ಮಾಡಲು ಕತಾರ್ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದರು ಎಂದು ಸುದ್ದಿ ಹಬ್ಬಿತ್ತು. ಈ ವಿಚಾರ ವೈರಲ್ ಆಗುತ್ತಿದ್ದಂತೇ ಶಾರುಖ್ ಮ್ಯಾನೇಜರ್ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ಕತಾರ್ ನಿಂದ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ವಿಚಾರದಲ್ಲಿ ಶಾರುಖ್ ಖಾನ್ ಪಾತ್ರವಿದೆ ಎಂದು ಸುದ್ದಿ ಹಬ್ಬಿದೆ. ಆದರೆ ಇದು ಕೇವಲ ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಇದರಲ್ಲಿ ಶಾರುಖ್ ಪಾತ್ರವಿಲ್ಲ. ಇಂತಹ ರಾಜತಾಂತ್ರಿಕ ವಿಚಾರನ್ನು ಸಮರ್ಥವಾಗಿ ನಿಭಾಯಿಸುವ ನಾಯಕತ್ವ ನಮಗಿದೆ. ಶಾರುಖ್ ಅವರೂ ಇತರೆ ಭಾರತೀಯರಂತೆ ಅಧಿಕಾರಿಗಳ ಬಿಡುಗಡೆ ವಿಚಾರಕ್ಕೆ ಖುಷಿಯಾಗಿದ್ದಾರೆ’ ಎಂದು ಸ್ಪಷ್ಟನೆ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು