News Karnataka Kannada
Saturday, April 27 2024
ಬೆಂಗಳೂರು

ಕುಮಾರಸ್ವಾಮಿಯನ್ನು ಬಿಜೆಪಿಯವರು ನಮ್ಮ ಮೇಲೆ ಛೂ ಬಿಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ

Assets gain beyond income case: Application by CBI for vacating stay order
Photo Credit : News Kannada

ಬೆಂಗಳೂರು: ಜೆಡಿಎಸ್ ಮುಂದಿನ ದಿನಗಳಲ್ಲಿ ಬಿಜೆಪಿಯೊಂದಿಗೆ ವಿಲೀನಗೊಂಡರೂ ಆಶ್ಚರ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ಮಾಜಿ ಶಾಸಕರಾದ ಡಿಸಿ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಕಾಂಗ್ರೆಸ್ ಸೇರಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ “ಕೋಮುವಾದಿ” ಪಕ್ಷವಾಗಿದೆ. ಹೀಗಾಗಿ ಅದರ ಹೆಸರಿನಿಂದ ‘ಸೆಕ್ಯುಲರ್’ ಪದವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

“ಮುಂದಿನ ದಿನಗಳಲ್ಲಿ ದೇಶದಲ್ಲಿ ರಾಜಕೀಯ ಧ್ರುವೀಕರಣ ಮತ್ತು ಮತಗಳ ಧ್ರುವೀಕರಣ ನಡೆಯಲಿದೆ, ಒಂದು ಕಡೆ ಕೋಮುವಾದಿ ಶಕ್ತಿಗಳು ಮತ್ತು ಇನ್ನೊಂದು ಕಡೆ ಜಾತ್ಯತೀತ ಶಕ್ತಿಗಳು. ಬಿಜೆಪಿ ಎಂದಿಗೂ ಹಿಂದುತ್ವ ಮತ್ತು ಹಿಂದೂ ರಾಷ್ಟ್ರ ರಚಿಸುವ ಅವರ ಯೋಜನೆಯಿಂದ ಹೊರಬರುವುದಿಲ್ಲ. ದೇವೇಗೌಡ ಮತ್ತು ಅವರ ಕುಟುಂಬವೂ ಬಿಜೆಪಿಯೊಂದಿಗೆ ಸೇರಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಜೆಡಿಎಸ್ ಒಂದು ರಾಜಕೀಯ ಪಕ್ಷವಲ್ಲ. ಅದು ದೇವೇಗೌಡ ಮತ್ತು ಅವರ ಕುಟುಂಬದ ಪಕ್ಷ. ನಾಳೆ ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾದರೆ ಆಶ್ಚರ್ಯವಿಲ್ಲ.. ದೇವೇಗೌಡರು ಇರುವವರೆಗೂ ಪ್ರತ್ಯೇಕ ರಾಜಕೀಯ ಪಕ್ಷವಾಗಿ ಉಳಿಯುತ್ತದೆ. ನಂತರ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎಂದರು.
ಬಿಜೆಪಿ ಅವರಿಗಿಂತ ಜೆಡಿಎಸ್ ಕುಮಾರಸ್ವಾಮಿನೇ ಹೆಚ್ಚು ಮಾತನಾಡ್ತಾರೆ. ಕುಮಾರಸ್ವಾಮಿನಾ ಬಿಜೆಪಿ ಅವರು ನಮ್ಮ ಮೇಲೆ ಛೂ ಬಿಟ್ಟಿದ್ದಾರೆ. ನೀವು ಏನೇ ಕುತಂತ್ರ ಮಾಡಿದರೂ ನಾವು ಚುನಾವಣೆಯಲ್ಲಿ ನಮ್ಮ ಗುರಿ ಸಾಧಿಸಿಯೇ ಸಾಧಿಸುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು