ಬೆಂಗಳೂರು : ಗ್ಯಾಸ್ ಗೀಜರ್ ನಿಂದ ಮೋನಾಕ್ಸೈಡ್ ಲೀಕ್ ಆಗಿ ಎಂಬಿಬಿಸ್ ವಿದ್ಯಾರ್ಥಿನಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ . ಸಂಪದ (23) ವರ್ಷದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ದುರಂತ ಸಾವಿಗೀಡಾಗಿದ್ದಾರೆ.
ಸೆಪ್ಟೆಂಬರ್ 4 ರಂದು ವಿದ್ಯಾರ್ಥಿನಿ ಸ್ನಾನಕ್ಕೆಂದು ತೆ ರಳಿದ್ದರು. ಈ ವೇಳೆ ಕಾರ್ಬನ್ ಮೋನಾಕ್ಸೈಡ್ ಲೀಕ್ ಆಗಿ ಉಸಿರುಗಟ್ಟಿ ಅಸುನಿಗಿದ್ದಾರೆ ಎಂದು ತಿಳಿದು ಬಂದಿದೆ. ಮಹಾಲಕ್ಷ್ಮೀ ಲೇಔಟ್ ನ ಮನೆಯ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದ ಸಂಪದ ಅಲ್ಲೇ ಮೃತಪಟ್ಟಿದ್ದಾರೆ.
2 ಗಂಟೆ ಕಳೆದರೂ ಸ್ನಾನದ ಮನೆಯಿಂದ ವಿದ್ಯಾರ್ಥಿನಿ ಹೊರಬಂದಿಲ್ಲ. ಗಾಬರಿಗೊಂಡ ಕುಟುಂಬದವರು ಡೋರ್ ಮುರಿದು ನೋಡಿದ ಬಳಿಕ ಕುಸಿದು ಬಿದ್ದಿದ್ದ ಸಂಪದಳನ್ನು ಕಂಡಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಕರೆತರುವ ಮೊದಲೆ ಮೃತಪಟ್ಟಿರುವುದಾಗಿ ತಿಳಿಸಿದ ವೈದ್ಯರು ತಿಳಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.