News Karnataka Kannada
Tuesday, May 07 2024
ವಿದೇಶ

2021ರಲ್ಲಿ ಬರೋಬ್ಬರಿ 17 ಬಿಲಿಯನ್ ಡಾಲರ್ ಲಾಭ ಪಡೆದ ಮುಖೇಶ್ ಅಂಬಾನಿ

Mukesh Ambani
Photo Credit :

ಏಷಿಯಾದ ಅತ್ಯಂತ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ 2021ರಲ್ಲಿ ಬರೋಬ್ಬರಿ 17 ಬಿಲಿಯನ್ ಡಾಲರ್ ಗಳಿಸುವ ಮೂಲಕ ತಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕಳೆದ ಒಂದೇ ವಾರದಲ್ಲಿ ಇದಕ್ಕೆ ಅರ್ಧದಷ್ಟು ಮೊತ್ತವನ್ನು ಗಳಿಸಿದ್ದಾರೆ. ಅಂಬಾನಿ ಒಡೆತನದ ರಿಲಯನ್ಸ್ ನಲ್ಲಿ ಮುಖೇಶ್ ಅವರ ಪಾಲುದಾರಿಕೆ ಶೇ.51ರಷ್ಟು ಇದ್ದು, ಇದರಿಂದ 8.5 ಬಿಲಿಯನ್ ಡಾಲರ್ ಲಾಭ ಪಡೆದಿದ್ದಾರೆ.

ರಿಲಯನ್ಸ್ ನ ಪ್ರತಿ ಷೇರಿನ ದರ ಶೇ.1.55ರಷ್ಟು ಏರಿಕೆಯಾಗುತ್ತಿದ್ದು, ಒಂದು ಷೇರಿನ ಬೆಲೆ ಈಗ 2,429 ರೂ. ಆಗಿದೆ. ಈ ಎಲ್ಲಾ ಲಾಭಗಳಿಂದ ಮುಖೇಶ್ ಅಂಬಾನಿ ಅವರ ಆಸ್ತಿ 94ಶತಕೋಟಿಗಿಂತಲೂ ಹೆಚ್ಚಾಗಿದೆ. ವಾರೆನ್ ಬಫೆಟ್ ನಂತರ 103 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.

ಸದ್ಯ ದೇಶದ ಬಹುತೇಕ ರಾಜ್ಯಗಳು ಕೊರೋನಾ ಲಾಕ್ ಡೌನ್ ನನ್ನು ತೆರವುಗೊಳಿಸುತ್ತಿದ್ದು, ರಿಲಯನ್ಸ್ ನ ಬ್ರಿಕ್ –ಮಾರ್ಟರ್ ಚೈನ್ ಉದ್ಯಮಗಳು ಮುಂದಿನ ತ್ರೈ ಮಾಸಿಕದಲ್ಲಿ ಆದಾಯ ಗಳಿಸುವ ಸಾಧ್ಯತೆ ಇದೆ. ರಿಲಯನ್ಸ್ ರಿಟೇಲ್ ಹಬ್ಬದ ಸೀಸನ್ ಗೆ ಮುಂಚಿತವಾಗಿ ಎಥ್ನಿಕ್ ವೇರ್ ಮತ್ತು ಸೀರೆಗಳನ್ನು ಮಾರಾಟ ಮಾಡುವ ‘ಅವಂತ್ರ’ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡಲು ಸಜ್ಜಾಗಿದೆ. ಈ ಹೊಸ ವಿಭಾಗಗಳನ್ನು ಅದರ ಬಂಡವಾಳಕ್ಕೆ ಸೇರಿಸುವುದರಿಂದ ಅದರ ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ವರದಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು