News Karnataka Kannada
Tuesday, May 07 2024
ಬೆಂಗಳೂರು

ಸಮಾಧಿ ಮುಂದೆ ವಿವಾಹಕ್ಕೆ ಒಪ್ಪಿಗೆ ಸೂಚಿಸಿಲ್ಲ : ನಟ ರಾಘವೇಂದ್ರ ರಾಜ್ ಕುಮಾರ

Raghavendra Rajkumar
Photo Credit :

ನಟ ಪುನೀತ್ ರಾಜ್ ಕುಮಾರ್ ಸಮಾಧಿ ಮುಂದೆ ವಿವಾಹವಾಗುವುದಾಗಿ ಒಂದು ಜೋಡಿ ಬಂದಿದ್ದು,ಆದ್ರೇ ನಾವು ನಿಮ್ಮ    ತಂದೆ-ತಾಯಿಗಳೊಂದಿಗೆ ಬಂದ್ರೆ ಮಾತ್ರ ವಿವಾಹಕ್ಕೆ ಒಪ್ಪಿಗೆ ಸೂಚಿಸೋದಾಗಿ ತಿಳಿಸಿದ್ದೇನೆ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಇಂದು ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಟ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳವನ್ನು ನೋಡೋದಕ್ಕೆ, ಅಪ್ಪುವಿಗೆ ನಮಿಸೋದಕ್ಕೆ ಸಾವಿರಾರು ಸಂಖ್ಯೆ ಜನರು ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಅಪ್ಪು ಮೇಲಿನ ಅವರ ಪ್ರೀತಿಗೆ ನಾ ಚಿರಋಣಿ. ಅಪ್ಪು ಎಲ್ಲೂ ಹೋಗಿಲ್ಲ. ನಮ್ಮಲ್ಲೇ, ಅಭಿಮಾನಿಗಳ ಮನದಲ್ಲೇ ನೆಲೆಸಿದ್ದಾರೆ ಎಂದರು.

ಪುನೀತ್ ಸಮಾಧಿ ಮುಂದೆ ವಿವಾಹ ಸಂಬಂಧ ಕೇಳಿದಂತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪುನೀತ್ ರಾಜ್ ಕುಮಾರ್ ಸಮಾಧಿ ಮುಂದೆ ವಿವಾಹ ಆಗೋದಾಗಿ ಒಂದು ಜೋಡಿ ಬಂದಿತ್ತು. ನಿಮ್ಮ ತಂದೆ-ತಾಯಿಗಳೊಂದಿಗೆ ಬಂದ್ರೆ ಮದುವೆಗೆ ಅನುಮತಿಸೋದಾಗಿ ಹೇಳಿ ಕಳುಹಿಸಿದ್ದೇನೆ. ಇವತ್ತು ಇವರು ಬರ್ತಾರೆ, ನಾಳೆ ಬೇರೆಯವರು ಬರ್ತಾರೆ. ಇದರಿಂದ ಅಪ್ಪುವಿಗೆ ಕೆಟ್ಟ ಹೆಸರು ಬರಬಾರದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು