ಬೆಂಗಳೂರು: ಇತ್ತೀಚಿಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಕೊನೆಯದಾಗಿ ಹಾಡಿದ ವಿಡಿಯೋವೊಂದನ್ನು ಅವರ ಸಹೋದರ ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ.
ತಮ್ಮ ಕುಟುಂಬದ ಬಾಲಕನೋರ್ವನ ಹುಟ್ಟುಹಬ್ಬದ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್, ಆ ಬಾಲಕನಿಗೆ ಸಂತೋಷದಿಂದ ಕೇಕ್ ತಿನ್ನಿಸಿ, ಸಹೋದರ ರಾಘವೇಂದ್ರ ರಾಜ್ ಕುಮಾರ್ ಜೊತೆಗೆ ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ ಹಾಡನ್ನು ಹಾಡಿದ್ದಾರೆ.
ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಜೊತೆಯಾಗಿ ಇದೇ ಕೊನೆಯದಾಗಿದ್ದು, ಆ ವಿಡಿಯೋವನ್ನು ರಾಘವೇಂದ್ರ ರಾಜ್ ಕುಮಾರ್ ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CV2A-jLgXFI/?utm_source=ig_embed&ig_rid=fdd7d1eb-093f-4602-8030-ffd2d1f89ef0&ig_mid=5CEC9DCA-4A8C-46B4-8484-D690D02573D9