News Karnataka Kannada
Friday, May 03 2024
ಬೆಂಗಳೂರು

ರಸ್ತೆ ಅಪಘಾತ: ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದು ವಾಹನ ಸವಾರ ಸಾವು

Accident
Photo Credit :

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಾಹನ ಸವಾರ ಏರ್ಪೋರ್ಟ್ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾನೆ.

ಬೆಂಗಳೂರಿನ ಜಕ್ಕೂರು ಏರೋಡ್ರಮ್ ಬಳಿ ಘಟನೆ ಸಂಭವಿಸಿದ್ದು, ಏರ್ಪೋರ್ಟ್ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನದಲ್ಲಿ 45 ವರ್ಷದ ಸವಾರ ಮತ್ತು ಹಿಂಬದಿಯಲ್ಲಿ12 ವರ್ಷದ ಬಾಲಕನಿದ್ದ.

ಎಡಬದಿಯಲ್ಲಿ ಹೋಗ್ತಿದ್ದ ಬೈಕ್ ಹಿಂದಿನಿಂದ ಬಂದ ಕಾರ್ ರಭಸವಾಗಿ ಗುದ್ದಿದೆ. ಇದರ ಪರಿಣಾಮ ವಾಹನ ಸವಾರ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾನೆ. 12 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಕ್ಸಿಡೆಂಟ್ ಸ್ಥಳದಿಂದ 2೦೦ ಮೀಟರ್ ದೂರದಲ್ಲಿ ಬೈಕ್ ಬಿದ್ದಿದೆ. ಪೊಲೀಸರು ಆಕ್ಸಿಡೆಂಟ್ ಗೆ ಒಳಗಾದವರ ಗುರುತು ಪತ್ತೆಹಚ್ಚುತ್ತಿದ್ದು, ಕೆ ಆರ್ ಪುರಂ ಬಳಿ ಕಾರು ಚಾಲಕನನ್ನ ಅರೆಸ್ಟ್ ಮಾಡಲಾಗಿದೆ. ಏರ್ ಪೋರ್ಟ್ ಕಡೆಯಿಂದ ಬೆಂಗಳೂರಿಗೆ ಬರುವ ಕಡೆ ದುರ್ಘಟನೆ ಸಂಭವಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು