ಬೆಂಗಳೂರು: ಮುಂದಿನ ತಿಂಗಳು ಪುನೀತ್ ಹೃದಯ ಜ್ಯೋತಿ ಯೋಜನೆ ಜಾರಿಯಾಗಲಿದೆ ಎಂದು ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಹೃದಯಾಘಾತ ಆದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಬೇಕು. ಸರಿಯಾಗಿ ಚಿಕಿತ್ಸೆ ಸಿಕ್ಕಿದ್ರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ರಾಜ್ಯದ 75 ತಾಲೂಕು ಆಸ್ಪತ್ರೆಗಳಲ್ಲಿ ಎಸ್ಪಿಒಕೆ ಹಬ್ ಮಾಡಲಾಗಿದೆ.
ಕ್ರಿಟಿಕಲ್ ಆಗಿದ್ದರೆ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಕೊಡಲಾಗುತ್ತದೆ. ಇದು ಹಠಾತ್ ಹೃದಯಾಘಾತ ಆಗುವುದನ್ನು ತಡೆಯುತ್ತದೆ. ಈ Tricog ಸಂಸ್ಥೆ ಎಐ ಮೂಲಕ ಕ್ರಿಟಿಕಲ್ ಇದೆಯಾ? ಇಲ್ಲವಾ ಎನ್ನುವುದನ್ನು ನೋಡಲಾಗುತ್ತದೆ. ಬಳಿಕ ಜಿಲ್ಲಾ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದರು.