News Karnataka Kannada
Monday, April 29 2024
ಬೆಂಗಳೂರು

ಬೆಂಗಳೂರು: ಬಾಟಲಿಯಲ್ಲಿ ₹ 2.50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

Drugs Mangalore 29 6 21
Photo Credit :

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಡೋಸ್ಸಾ ಖಲೀಫಾ (28) ಎಂಬಾತನನ್ನು ಬಂಧಿಸಿರುವ ಗೋವಿಂದಪುರ ಪೊಲೀಸರು, ₹ 2.50 ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಿದ್ದಾರೆ.

ಐವರಿಕೋಸ್ಟ್ ಪ್ರಜೆ ಡೋಸ್ಸಾ, ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿ ದ್ದ. ಎಚ್‌ಬಿಆರ್ ಲೇಔಟ್‌ನ 4ನೇ ಹಂತದಲ್ಲಿ ವಾಸವಿದ್ದ. ಆದರೆ, ಆತನ ಬಳಿ ಸದ್ಯ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಎನ್‌ಡಿಪಿಎಸ್ ಹಾಗೂ ವಿದೇಶಿ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಡ್ರಗ್ಸ್ ಪ್ರಕರಣದಲ್ಲಿ ಮಹಿಳಾ ಉದ್ಯಮಿ ಸೋನಿಯಾ ಅಗರವಾಲ್ ಸೇರಿ ಹಲವರನ್ನು ಇತ್ತೀಚೆಗಷ್ಟೇ ಬಂಧಿ ಸಲಾಗಿತ್ತು. ಅವರ ವಿಚಾರಣೆಯಿಂದ ಡೋಸ್ಸಾ ಬಗ್ಗೆ ಮಾಹಿತಿ ಸಿಕ್ಕಿತ್ತು. ಆತನೇ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪ್ರಮುಖ ಪೆಡ್ಲರ್ ಎಂಬುದು ಗೊತ್ತಾಗಿತ್ತು. ಅದೇ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಡೋಸ್ಸಾನನ್ನು ಬಂಧಿಸಲಾಗಿದೆ ಎಂದೂ ತಿಳಿಸಿದರು.

ಗೋವಾದಿಂದ ಡ್ರಗ್ಸ್ ತರಿಸು ತ್ತಿದ್ದ ಆರೋಪಿ ಡೋಸ್ಸಾ, ನಗರದ ಕೆಲ ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿ ಗಳಿಗೆ ಸರಬರಾಜು ಮಾಡುತ್ತಿದ್ದ. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು, ಕೆಲ ಉದ್ಯಮಿಗಳಿಗೂ ಡ್ರಗ್ಸ್ ನೀಡುತ್ತಿದ್ದ.

ಶಾಂಪೇನ್ ಬಾಟಲಿಗಳಲ್ಲಿ ಡ್ರಗ್ಸ್ ಮಾತ್ರೆಗಳನ್ನು ಬಚ್ಚಿಟ್ಟು ಗ್ರಾಹಕರಿಗೆ ತಲುಪಿಸುತ್ತಿದ್ದ. ಹೀಗಾಗಿ, ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಆರೋಪಿ ಜೊತೆ ಒಡನಾಟ ಹೊಂದಿದ್ದ ಕೆಲವರು ಗೋವಾದಲ್ಲಿದ್ದು, ಅವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದೂ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು