News Karnataka Kannada
Sunday, April 28 2024
ಬೆಂಗಳೂರು

ಡ್ರಗ್ಸ್ ನಂಟು : ಮಹಿಳೆ ಸೇರಿ ಮೂವರ ಮನೆಗಳ ಮೇಲೆ ದಾಳಿ

Karnataka Police
Photo Credit :

ಬೆಂಗಳೂರು, ; ಡ್ರಗ್ಸ್ ನಂಟು ಹೊಂದಿದ್ದಾರೆಂಬ ಮಾಹಿತಿ ಮೇರೆಗೆ ಪೂರ್ವ ವಿಭಾಗದ ಪೊಲೀಸರು ಇಂದು ಬೆಳಗ್ಗೆ ಏಕಕಾಲದಲ್ಲಿ ಮಹಿಳೆ ಸೇರಿದಂತೆ ಮೂವರು ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ರಾಜಾಜಿನಗರದ 4ನೇ ಬ್ಲಾಕ್ ಭಾಷಂಸರ್ಕಲ್ ಬಳಿಯ ನಿವಾಸಿ ಸೋನಿಯಾ ಅಗರ್‍ವಾಲ್ ಹಾಗೂ ಬನಶಂಕರಿಯ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಭರತ್ ಮತ್ತು ಬೆನ್ಸನ್‍ಟೌನ್ ನಿವಾಸಿ, ಬ್ಯಾಂಡ್ ವಾದಕ ವಚನ್ ಚಿನ್ನಪ್ಪ ಎಂಬುವರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ರಗ್ಸ್ ಪೆಡ್ಲರ್ ಥಾಮಸ್ ನೀಡಿದ ಹೇಳಿಕೆ ಮೇರೆಗೆ ಈ ಮೂವರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಸೋನಿಯಾ ಅಗರ್‍ವಾಲ್ ಅವರ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ, ವಚನ್ ಚಿನ್ನಪ್ಪ ಮತ್ತು ಭರತ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಮೂವರ ಪೈಕಿ ಇಬ್ಬರ ಮನೆಗಳಲ್ಲಿ ಗಾಂಜಾ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪರಿಶೀಲನೆ ಮುಂದುವರೆದಿದೆ. ಕಳೆದ ಆ.12ರಂದು ನೈಜೀರಿಯಾ ಮೂಲದ ಥಾಮಸ್ ಕಲ್ಲು ಎಂಬಾತನನ್ನು ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ನಗರದ ಎಚ್‍ಆರ್‍ಬಿಆರ್ ಲೇಔಟ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ 15.50 ಲಕ್ಷ ರೂ. ಮೌಲ್ಯದ 403 ಎಕ್ಸೆಟೆಸಿ ಪಿಲ್ಸ್ ವಶಪಡಿಸಿಕೊಂಡಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಫ್ಟ್‍ವೇರ್ ಕಂಪೆನಿ ಉದ್ಯೋಗಿಗಳಿಗೆ ಈ ಎಕ್ಸೆಟೆಸಿಪಿಲ್ಸ್ ನೀಡುತ್ತಿದ್ದನು. ಸೆಲೆಬ್ರೆಟಿಗಳಿಗೆ ಮಾತ್ರ ದುಬಾರಿ ಮೌಲ್ಯದ ಕೊಕೈನ್ ಸಿಂಥಟಿಕ್ ಡ್ರಗ್ಸ್ ನೀಡುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು