News Karnataka Kannada
Thursday, May 02 2024
ಬೆಂಗಳೂರು

ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಕಂಟೈನ್‌ ಮೆಂಟ್‌ ವಲಯಗಳು

Bangalore City 2 7 21
Photo Credit :

ಬೆಂಗಳೂರು, ; ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸಂಬಂಧಿಸಿದಂತೆ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಾವಿರದ ಗಡಿ ಸನಿಹಕ್ಕೆ ತಲುಪಿವೆ.ನಗರದ ವ್ಯಾಪ್ತಿಯಲ್ಲಿ ಒಟ್ಟು 926 ಕಂಟೈನ್ಮೆಂಟ್ ಝೋನ್‌ಗಳನ್ನು ಗುರುತಿಸಲಾಗಿದ್ದು, ಈ ಪೈಕಿ 131 ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳಿವೆ ಎಂದೂ ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಇದೇ ತಿಂಗಳ19 ರಂದು ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ 127 ಇತ್ತು. ಆದರೆ ಈಗ, 131 ಕಂಟೈನ್ಮೆಂಟ್ ಝೋನ್‌ಗಳಾಗಿವೆ.
ಎಲ್ಲಿ, ಎಷ್ಟು: ಪ್ರಸ್ತುತ ಎಂಟು ವಲಯಗಳ ಮಾಹಿತಿ ಅನ್ವಯ ಮಹದೇವಪುರ- 27, ಬೊಮ್ಮನಹಳ್ಳಿಯಲ್ಲಿ- 24, ದಕ್ಷಿಣ ವಲಯ – 22, ಯಲಹಂಕ- 20, ಪೂರ್ವವಲಯ- 22 , ಪಶ್ಚಿಮ ವಲಯದಲ್ಲಿ-10, ಆರ್ ಆರ್ ನಗರ- 6 ಸೂಕ್ಷ್ಮ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ.
ಅದೇ ರೀತಿ, ಬೆಳ್ಳಂದೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದರೆ, ಇಲ್ಲಿನ ಹೊರಮಾವು- 7, ಹೂಡಿ 6, ರಾಜಾರಾಜೇಶ್ವರಿ ನಗರ 6, ಬೇಗೂರು 5, ಕೆ.ಆರ್ ಪುರ 5, ಹಗದೂರಿ 5, ಸಿಂಗಸಂದ್ರ 5, ರಾಮಮೂರ್ತಿ ನಗರ 4 ,ದೊಡ್ಡನೆಕುಂದಿ 4 ಪ್ರಕರಣಗಳು ಪ್ರತಿ ದಿನ ಬೆಳಕಿಗೆ ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು