ಬೆಂಗಳೂರಿನ ನ್ಯೂ ತಗರುಪೇಟೆಯಲ್ಲಿ ಸ್ಫೋಟ ಪ್ರಕರಣದ ಪ್ರಾಥಮಿಕ ವರದಿ ಲಭ್ಯವಾಗಿದ್ದು, ಸ್ಫೋಟಕ್ಕೆ ಪಟಾಕಿ ರೀಲ್ ಕಾರಣ ಎನ್ನಲಾಗಿದೆ. ರೀಲ್ ಪಟಾಕಿಯ ದೊಡ್ಡ ಡ್ರಮ್ ನೆಲಕ್ಕೆ ಬಿದ್ದು ಸ್ಫೋಟ ಆಗಿದೆ.
ಎಫ್ಎಸ್ಎಲ್, ಬಾಂಬ್ ನಿಷ್ಕ್ರಿಯ ತಂಡದಿಂದ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಗನ್ ಅಥವಾ ಕಲ್ಲಿನಿಂದ ರೀಲ್ ಮೇಲೆ ಹೊಡೆದು ಬ್ಲಾಸ್ಟ್ ಮಾಡಲಾಗುತ್ತದೆ.
ಅದೇ ರೀತಿ ಪಟಾಕಿ ರೀಲ್ನ ಡ್ರಮ್ ಕೆಳಕ್ಕೆ ಬಿದ್ದಿದ್ದು, ಬ್ಲಾಸ್ಟ್ ಆಗಿದೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿ ಗೋದಾಮು ಮಾಲೀಕ ಗಣೇಶ್ ಬಾಬು ಬಂಧಿಸಲಾಗಿದೆ.