News Karnataka Kannada
Friday, May 10 2024
ಬೆಂಗಳೂರು

ದೂರ ಸಂಪರ್ಕ ಇಲಾಖೆಗೆ ವಂಚನೆ: 6 ಜನರ ಬಂಧನ

Untitled 157
Photo Credit :

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ಮತ್ತು ಸರ್ಕಾರಕ್ಕೆ ಲಕ್ಷಾಂತರ ವಂಚಿಸಿದ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಅನಾಮಧೇಯ ಕರೆ ಮಾಡಿ ಜೀವ ಬೆದರಿಕೆವೊಡ್ಡಿದ ಆರೋಪದಲ್ಲಿ ಆರು ಮಂದಿಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

ಕೇರಳದ ದುಬೇರ್, ಮನು, ಇಸ್ಮಾಯಿಲ್ ಅಬ್ದುಲ್ಲ, ಜೋಹಾರ್ ಶರೀಫ್, ಸಾಹಿರ್ ಮತ್ತು ಬೆಂಗಳೂರಿನ ರವಿಚಂದ್ರನ್ ಬಂಧಿತರು. ಆರೋಪಿಗಳಿಂದ ಕರೆ ಪರಿವರ್ತನೆಗೆ ಬಳಸುವ ಅತ್ಯಾಧುನಿಕ ಸಾಧನಗಳಾದ 16 ಸಿಮ್‍ಬಾಕ್ಸ್, 2 ಎಸ್‍ಐಪಿ ಟ್ರಂಕ್‍ಕಾಲ್ ಡಿವೈಸ್, 9 ಪ್ರೈಮರಿ ರೇಟ್ ಇಂಟರ್‍ಫೇಸ್ (ಪಿಆರ್‌ಐ), 5 ಲ್ಯಾಪ್‍ಟಾಪ್, 2 ಡೆಸ್ಕ್‌ಟಾಪ್, 9 ಮೊಬೈಲ್, 6 ವೈ-ಫೈ ರೂಟರ್‌, ಬಿಎಸ್‍ಎನ್‍ಎಲ್‌ಗೆ ಸೇರಿದ 205 ಸಿಮ್‍ ಕಾರ್ಡ್‌ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಲ್ಲಿ ಪ್ರಮುಖರು ಕೇರಳದವರಾಗಿದ್ದು, ಸ್ಥಳೀಯರ ಸಹಕಾರ ಪಡೆದು ಬೆಂಗಳೂರಿನ ಚಿಕ್ಕಸಂದ್ರ, ಹೆಸರಘಟ್ಟ ಮುಖ್ಯರಸ್ತೆ ಬಳಿ ಬಾಡಿಗೆ ಮನೆ ಪಡೆದು ಕಾರ್ಯಾಚರಣೆ ನಡೆಸುತ್ತಿದ್ದರು. ಬೆಂಗಳೂರು ಮತ್ತು ಕೇರಳ ರಾಜ್ಯದ ವಿವಿಧೆಡೆ ಸೇರಿ ಐದು ಕಡೆಗಳಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ ಮೂಲದ ಆರೋಪಿಗಳು ಸ್ಥಳೀಯ ವ್ಯಕ್ತಿಗಳ ಜತೆ ಸೇರಿಕೊಂಡು ಮಹಾದೇವಪುರದಲ್ಲಿ ಕಾಲ್‍ಸೆಂಟರ್‌ಗಳಿಗೆ ನೀಡಲಾಗುವ ಏರ್‌ಟೆಲ್‌ನ ಎಸ್‍ಐಪಿ ಟ್ರಂಕ್‍ಕಾಲ್ ಡಿವೈಸ್‍ಗಳನ್ನು ಪಡೆದುಕೊಂಡಿದ್ದರು. ಐಕಾನ್ ಟೂರ್ಸ್‌ ಆಯಂಡ್ ಟ್ರಾವೆಲ್ಸ್ ಕಂಪನಿ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ, ಏರ್‌ಟೆಲ್‌ ಕಂಪನಿಯ 180 ಪೋರ್ಟ್‍ಗಳಿರುವ ಸ್ಥಿರ ದೂರವಾಣಿ ಪಡೆದುಕೊಂಡು ವಾಯ್ಸ್ ಒವರ್ ಇಂಟರ್‌ನೆಟ್‌ ಪ್ರೊಟೋಕಾಲ್ ಕರೆಗಳನ್ನು ಜಿಎಸ್‍ಎಂ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು.

ಮಧ್ಯಪ್ರಾಚ್ಯ ದೇಶಗಳಿಂದ ಬರುವ ಟೆಲಿಫೋನ್ ಕರೆಗಳನ್ನು ಸಿಮ್‍ಬಾಕ್ಸ್ ಡಿವೈಸ್, ಪಿಆರ್‌ಐ ಮತ್ತು ಎಸ್‍ಐಪಿ ಟ್ರಂಕ್‍ಕಾಲ್ ಸಾಧನಗಳನ್ನು ಬಳಸಿ ಆರೋಪಿಗಳು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು. ಅತ್ಯಾಧುನಿಕ ವ್ಯವಸ್ಥೆಯಾಗಿದ್ದರಿಂದ ಕರೆಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಆರೋಪಿಗಳು ಉತ್ತರಪ್ರದೇಶ, ಮಧ್ಯಪ್ರದೇಶ, ಪಶ್ಚಿಮಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬಿಎಸ್‍ಎನ್‍ಎಲ್ ಸಿಮ್‍ ಕಾರ್ಡ್‌ ಖರೀದಿಸಿದ್ದರು. ಸಿಮ್‍ಬಾಕ್ಸ್ ಉಪಕರಣಗಳಿಗೆ ಅದನ್ನು ಅಳವಡಿಸಿ ಎಕ್ಸಿಟೆಲ್ ಕಂಪೆನಿಯ ಇಂಟರ್‌ನೆಟ್‌ ಬಳಸಿ ಕರೆಗಳನ್ನು ಅಕ್ರಮವಾಗಿ ಪರಿವರ್ತಿಸಲಾಗುತ್ತಿತ್ತು. ಹೀಗಾಗಿ, ಆರೋಪಿಗಳ ಕೃತ್ಯವನ್ನು ಪತ್ತೆ ಮಾಡುವುದೂ ಸವಾಲಿನ ಕೆಲಸವಾಗಿತ್ತು.

‘ವಾಯ್ಸ್ ಓವರ್ ಇಂಟರ್‌ನೆಟ್‌ ಪ್ರೋಟೋಕಾಲ್ ಮೂಲಕ ಬರುವ ಅಂತರರಾಷ್ಟ್ರೀಯ ಕರೆಗಳ ಸಂಖ್ಯೆಗಳನ್ನು ಪತ್ತೆ ಮಾಡುವುದು ಮತ್ತು ಸ್ಥಳ ಗುರುತಿಸುವುದು ಕಷ್ಟದ ಕೆಲಸವಾಗಿದೆ. ಕರೆ ಸ್ವೀಕರಿಸಿದವರಿಗೆ ಸ್ಥಳೀಯ ಮೊಬೈಲ್ ನಂಬರ್‌ ಕಾಣುತ್ತವೆ. ಆದರೆ, ಅವುಗಳ ನಿರ್ದಿಷ್ಟ ವಿಳಾಸ ಮತ್ತು ಕರಾರುವಕ್ಕಾದ ಸ್ಥಳ ಲಭ್ಯವಾಗುವುದಿಲ್ಲ. ಈ ಕರೆಗಳು ಯಾವುದೇ ನಿಯಂತ್ರಣಕ್ಕೂ ಒಳಪಟ್ಟಿರುವುದಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು