ಕೊರೋನಾದಿಂದ ಕಳೆಗುಂದಿದ್ದ ರಂಗಭೂಮಿಯನ್ನು ರಂಗೇರಿಸಿದ ಪರ್ವ

ಬೆಂಗಳೂರು: ರಂಗಭೂಮಿಗೂ ಕೋವಿಡ್ ಸಾಂಕ್ರಾಮಿಕದ ಪರಿಣಾಮ ತಟ್ಟಿದೆ. ಸುಮಾರು ಎರಡು ವರ್ಷ ಕಾಲ ರಂಗಭೂಮಿ ಚಟುವಟಿಕೆಯೇ ನಿಂತು ಹೋಗಿದೆ. ಈ ಮಧ್ಯೆ ಭರವಸೆಯ ಆಶಾ ಕಿರಣ ಮೂಡಿಸಿದೆ ‘ಪರ್ವ’.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನ ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ಪರ್ವ ನಾಟಕ ಪ್ರದರ್ಶನಗೊಂಡಿತು. ಎರಡು ವರ್ಷಗಳ ಬಳಿಕ ರವೀಂದ್ರ ಕಲಾಕ್ಷೇತ್ರದ ಎಲ್ಲ ಆಸನಗಳು ಭರ್ತಿಯಾದದ್ದು ವಿಶೇಷ. ಟಿಕೆಟ್‌ಗಳು ರವೀಂದ್ರ ಕಲಾಕ್ಷೇತ್ರದ ಕೌಂಟರ್ ಹಾಗೂ ಆನ್‌ಲೈನ್‌ನಲ್ಲಿ ಪಡೆಯಲು ಅವಕಾಶವಿತ್ತು.

ಶನಿವಾರ ಮತ್ತು ಭಾನುವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಡೆದ ನಾಟಕ ಪ್ರದರ್ಶನದ ಎಲ್ಲ ಟಿಕೆಟ್‌ಗಳು ಎರಡು ದಿನ ಹಿಂದೆಯೇ ಸೋಲ್‌ಡ್‌ ಔಟ್ ಆಗಿದ್ದವು. 500 ಹಾಗೂ 250 ರೂ. ಟಿಕೆಟ್ ದರ ನಿಗದಿ ಪಡಿಸಲಾಗಿತ್ತು.

ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಕಾದಂಬರಿಗೆ ದೊಡ್ಡದಾದ ಬಳಗವಿದೆ. ಭೈರಪ್ಪ ಅವರ ಕಾದಂಬರಿ ಆಧರಿಸಿದ ಈ ನಾಟಕವನ್ನು ನಿರ್ದೇಶಿಸಿದ್ದು ರಂಗಕರ್ಮಿ ಪ್ರಕಾಶ್ ಬೆಳವಾಡಿ. ಪರ್ವ ಎಂಟು ತಾಸುಗಳ ನಾಟಕ. ಮೈಸೂರಿನಲ್ಲಿ ಈ ನಾಟಕದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ನಿರೀಕ್ಷೆಯಂತೆ ಬೆಂಗಳೂರಿನಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾಟಕ ಮುಗಿಯುತ್ತಿದ್ದಂತೆ ಪ್ರೇಕ್ಷಕರು ಎದ್ದುನಿಂತು ಕರತಾಡನ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾತಾಡ್ ಮಾತಾಡ್ ಕನ್ನಡ ಅಭಿಯಾನದಲ್ಲಿ ರಾಜ್ಯದ ವಿವಿಧೆಡೆ ಪರ್ವ ನಾಟಕದ ಪ್ರದರ್ಶನ ಏರ್ಪಾಡಾಗಿದೆ.

Sneha Gowda

Recent Posts

ಜೆಪಿ ನಡ್ಡಾ, ಬಿವೈ ವಿಜಯೇಂದ್ರಗೆ ಸಮನ್ಸ್‌ ಜಾರಿ ಮಾಡಿದ ಬೆಂಗಳೂರು ಪೊಲೀಸ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರಿಗೆ…

6 mins ago

ಹಳ್ಳಕ್ಕೆ ತಡೆಗೋಡೆ ನಿರ್ಮಾಣ: ತೆರವಿಗೆ ಆಗ್ರಹಿಸಿ ಮನವಿ

ಕೊಪ್ಪಾ ತಾಲೂಕಿನ ಕಾಡ್ಕೆರೆಯಲ್ಲಿ ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು…

41 mins ago

ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ: ಪುಂಡಾನೆ ಪತ್ತೆಗೆ ಟ್ರ್ಯಾಪ್ ಕ್ಯಾಮೆರಾ

ಕಾಡಾನೆ ಹಾವಳಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಐದು ಜನ ಪ್ರಾಣ ಕಳೆದುಕೊಂಡಿದ್ದಾರೆ.

56 mins ago

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಇಬ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಜೋಡಿ ಕೊಲೆ ಮಾಡಲಾದ ಘಟನೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ನಡೆದಿದೆ.

1 hour ago

ರೈತರ ಕಷ್ಟ ಕೇಳುವವರಿಲ್ಲ: ವಿನಯ್ ಗುರೂಜಿ ವಿಷಾದ

ದೊಡ್ಡ ದೊಡ್ಡವರ ಕಷ್ಟ ಕೇಳಲು ದೊಡ್ಡ ದೊಡ್ಡವರಿದ್ದಾರೆ. ಆದರೆ ಜಗತ್ತಿಗೆ ಅನ್ನ ನೀಡುವ ರೈತನ ಕಷ್ಟ ಕೇಳುವ ಮನಸ್ಸು ದೊಡ್ಡವರಿಗಿಲ್ಲ…

1 hour ago

ಕೈಕೊಟ್ಟ ಶೀತಲಯಂತ್ರಗಳಿಂದ ಶವಾಗಾರದಲ್ಲಿ ದುರ್ವಾಸನೆ

ಎಲ್ಲರೂ ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜು  ಬಳಿಯ ಶವಾಗಾರದ ಬಳಿ ಎದುರಾಗಿದೆ. ಇದಕ್ಕೆ ಶವಾಗಾರದ ಶೀತಲ…

1 hour ago