ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಇಬ್ಬರ ಕೊಲೆ

ಶಿವಮೊಗ್ಗ: ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಜೋಡಿ ಕೊಲೆ ಮಾಡಲಾದ ಘಟನೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ನಡೆದಿದೆ.

ಗೌಸ್(30) ಮತ್ತು ಶೋಹೆಬ್(35) ಕೊಲೆಯಾದ ವ್ಯಕ್ತಿಗಳು. ಹಳೆಯ ವೈಷಮ್ಯ ಹಿನ್ನೆಲೆ, ಇಬ್ಬರ ಹತ್ಯೆ ನಡೆದಿರುವ ಶಂಕೆಯಿದ್ದು, ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಮೃತ ರೌಡಿ ಶೀಟರಗಳು, ಮತ್ತೋರ್ವ ರೌಡಿಶೀಟರ್ ಆದ ಯಾಸೀನ್ ಖುರೇಷಿ ಮೇಲೆ ಹಲ್ಲೆ ಮಾಡಲು ಬಂದಿದ್ದರು. ಈ ವೇಳೆ ಯಾಸೀನ್ ಖುರೇಷಿ ಕಡೆಯವರು ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ರೌಡಿಶೀಟರ್ ಯಾಸೀನ್ ಖುರೇಷಿಗೆ ಗಾಯವಾಗಿದ್ದು, ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಎಸ್ಆರ್​ ತುಕಡಿ ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Chaitra Kulal

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

6 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

6 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

7 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

7 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

7 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

8 hours ago