ರೈತರ ಕಷ್ಟ ಕೇಳುವವರಿಲ್ಲ: ವಿನಯ್ ಗುರೂಜಿ ವಿಷಾದ

ಜಯಪುರ: ದೊಡ್ಡ ದೊಡ್ಡವರ ಕಷ್ಟ ಕೇಳಲು ದೊಡ್ಡ ದೊಡ್ಡವರಿದ್ದಾರೆ. ಆದರೆ ಜಗತ್ತಿಗೆ ಅನ್ನ ನೀಡುವ ರೈತನ ಕಷ್ಟ ಕೇಳುವ ಮನಸ್ಸು ದೊಡ್ಡವರಿಗಿಲ್ಲ ಎಂದು ಗೌರಿಗದ್ದೆಯ ಶ್ರೀ ವಿನಯ ಗುರೂಜಿ ಹೇಳಿದರು.

ಹೇರೂರು ಗ್ರಾಪಂ ವ್ಯಾಪ್ತಿಯ ಹಾಡುಗಾರಿನ ಶ್ರೀ ವನದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವರ್ಣ ಮೇಧಿನಿ ಎಂಬ ನೂತನ ಚಲನಚಿತ್ರದ ಮುಹೂರ್ತದ ವೇಳೆ ಮಾತನಾಡಿದ ಅವರು. ರೈತರ ಬದುಕು ಕಷ್ಟದ ಬದುಕಾಗಿದೆ.

ಅಂತಹ ರೈತನ ಕಷ್ಟ ಸುಖಗಳನ್ನು ಚಿತ್ರದ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ನಿರ್ಮಾಪಕ ಚಂದ್ರಗಿರಿ ದಿನೇಶ್ ಮಾಡುತ್ತಿದ್ದಾರೆ ಕನ್ನಡ ಚಲನಚಿತ್ರಗಳನ್ನು ಕನ್ನಡಿಗರೇ ಬೆಳಸಬೇಕಾಗಿದ್ದು ಪ್ರತಿಯೊಬ್ಬರೂ ಕನ್ನಡ ಚಲನಚಿತ್ರಗಳನ್ನು ನೋಡಬೇಕು.

ರೈತರಂತೆ ಕಲಾವಿದರೂ ತಮ್ಮೊಳಗಿನ ನೋವು ಮರೆತು ಪ್ರೇಕ್ಷಕರನ್ನು ನಗಿಸುವ ಮನರಂಜಿಸುವ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದೇಶ ವಿದೇಶಗಳಲ್ಲೂ ಯಶಸ್ಸು ಸಿಗುವಂತಾಗಲಿ ಎಂದು ಹಾರೈಸಿದರು.

Chaitra Kulal

Recent Posts

ಮಲ್ಲಮ್ಮ ಜಯಂತಿಗೆ ಅಗೌರವ : ರೆಡ್ಡಿ ಸಮಾಜ ಪದಾಧಿಕಾರಿಗಳ ಪ್ರತಿಭಟನೆ

ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…

2 mins ago

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

21 mins ago

ನಿಮ್ಮ ಡಲ್‌ಸ್ಕಿನ್‌ಗೆ ಇದು ಬೆಸ್ಟ್‌ ಪಾನೀಯ : ಎರಡು ವಾರದಲ್ಲೆ ಉತ್ತಮ ರಿಸಲ್ಟ್‌

ಬೇಸಿಗೆಯಲ್ಲಿ ಬಿಸಿಲಿನ ತಾಪ, ಕಲುಷಿತ ನೀರು, ಮಾಲಿನಗೊಂಡ ವಾತಾವರಣದಿಂದಾಗಿ ಸಾಕಷ್ಟು ಜನರು ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಡಲ್‌ಸ್ಕಿನ್‌ ಇರುವವರೂ…

32 mins ago

ಇಂದು 49 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ…

50 mins ago

ಇಂದಿನ ರಾಶಿ ಭವಿಷ್ಯ : ಈ ರಾಶಿಯವರಿಗೆ ಹೊಸ ಉದ್ಯೋಗ ಆಫರ್ ಬರಲಿದೆ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ…

1 hour ago

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

9 hours ago