ಬೆಂಗಳೂರು: ಕೆಲವು ದಿನಗಳಿಂದ ಚಿನ್ನಾಭರಣದ ಬೆಲೆ ಏರುತ್ತಲೇ ಇದೆ. ಇಂದು ಸಹ ಆಭರಣದ ಬೆಲೆ ಕೊಂಚ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,010 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,010 ರೂಪಾಯಿ ಹಾಗೂ 100 ಗ್ರಾಂ ಚಿನ್ನ 4,80,100 ರೂಪಾಯಿಗೆ ಏರಿಕೆ ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,360 ಏರಿಕೆ ಆಗಿದೆ. ದೈನಂದಿನ ದರ ಏರಿಕೆಯಲ್ಲಿ 100 ರೂಪಾಯಿ ಏರಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,390 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರ ಸ್ಥಿರವಾಗಿದ್ದು ಕೆಜಿ ಬೆಳ್ಳಿಗೆ 68,200 ರೂಪಾಯಿ ಇದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,160 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,360 ರೂಪಾಯಿಗೆ ಏರಿಕೆಯಾಗಿದೆ.