News Karnataka Kannada
Saturday, May 04 2024
ವಿಜಯಪುರ

ಮನೆಮನೆ ಪ್ರಚಾರ ಕಾರ್ಯ: ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಪರ ಬಿರುಸಿನ ಪ್ರಚಾರ

ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮಹಾಸಂಪರ್ಕ ಅಭಿಯಾನ ಅಂಗವಾಗಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ 31 ಮತ್ತು 33 ನೇ ವಾರ್ಡ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರ ಭರ್ಜರಿ ಪ್ರಚಾರ ನಡೆಸಿದರು.
Photo Credit : NewsKarnataka

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮಹಾಸಂಪರ್ಕ ಅಭಿಯಾನ ಅಂಗವಾಗಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ 31 ಮತ್ತು 33 ನೇ ವಾರ್ಡ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರ ಭರ್ಜರಿ ಪ್ರಚಾರ ನಡೆಸಿದರು.

ವಿಜಯಪುರ ನಗರದ ವಾರ್ಡ್ ನಂ. 31 ರಲ್ಲಿರುವ ರಾಘವೇಂದ್ರ ಚಾಳ, ಅಜರೇಕರ ಚಾಳ ಬಡಾವಣೆಗಳಲ್ಲಿ ಮತ್ತು 33 ನೇ ವಾರ್ಡಿನ ಶಾಸ್ತ್ರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ ಹತ್ತು ವರ್ಷಗಳ ಸಾಧನೆಗಳು, ಜನಪರ ಯೋಜನೆಗಳು, ದೇಶದಲ್ಲಾದ ಸಕಾರಾತ್ಮಕ ಬದಲಾವಣೆಗಳ ಜೊತೆಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟು, ವಿಕಸಿತ ಭಾರತದ ಸಂಕಲ್ಪದೊಂದಿಗೆ ದೇಶವಾಸಿಗಳ ರಕ್ಷಣೆಗೆ ಪಣತೊಟ್ಟಿರುವ ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಆಶಿರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

ಪ್ರತಿ ಮನೆಗಳಲ್ಲಿ ಸಿಕ್ಕ ಅದ್ಬುತ ಸ್ಪಂದನೆ ಹಾಗೂ ಬೆಂಬಲದಾಯಕ ಮಾತುಗಳು ಕಾರ್ಯಕರ್ತರ ಚುನಾವಣಾ ಪ್ರಚಾರದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದ್ದವು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಕೃಷ್ಣಾ ಗುನ್ಹಾಳಕರ್, ರಾಜೇಶ ತವಸೆ, ಮಾಧ್ಯಮ ಸಂಚಾಲಕ ವಿಜಯ್ ಜೋಶಿ, ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ವಿಠ್ಠಲ ನಡುವಿನಕೇರಿ ಬಿಜೆಪಿ ಮುಖಂಡರಾದ, ರೋಹನ್ ಆಪ್ಟೆ, ಆದಿತ್ಯ ತಾವರಗೇರಿ, ಆನಂದ ಮುಚ್ಚಂಡಿ, ಅನಿಲ್ ಉಪ್ಪಾರ, ನಿಖಿಲ್ ಮ್ಯಾಗೇರಿ, ಕೃಷ್ಣ ಮ್ಯಾಗೇರಿ, ಜಗದೀಶ್ ಮುಚ್ಚಂಡಿ, ಅಭಯ ಹದನೂರ, ಕಿರಣ ಸೌದಿ, ವಿಕಾಸ್ ಕಿಟ್ಟ, ಶಿವರಾಜ್ ಮಡಿವಾಳ, ಪ್ರತೀಕ ಮುಪ್ಪೈನಮಠ, ದಯಾನಂದ ಅಫ್ಜಲಪುರ, ಸತೀಶ ಮಂಟೂರ, ರೋಹನ್ ದಾಶಾಳ, ಪ್ರಮೋದ್ ಐನಾಪುರ, ವಿನಾಯಕ್‌ ದಹಿಂದೆ, ಗಣೇಶ ಶಿಂದೆ, ವಿನೋದ ಪತ್ತಾರ ಸೇರಿದಂತೆ ವಾರ್ಡಿನ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು