News Karnataka Kannada
Tuesday, May 07 2024
ವಿಜಯಪುರ

ಅಳಿಯನನ್ನು ಹತ್ಯೆ ಮಾಡಿದ ಮಾಜಿ ಕಾರ್ಪೋರೇಟರ್​: ನಾಲ್ವರು ಬಂಧನ

Photo Credit :

ವಿಜಯಪುರ : ಇದೇ ಫೆಬ್ರುವರಿ 14ರ ಪ್ರೇಮಿಗಳ ದಿನದಂದೇ ಅಳಿಯನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮಾಜಿ ಕಾರ್ಪೋರೇಟರ್​ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮಗಳು ಮದ್ವೆಯಾಗಿದ್ದಳು ಎನ್ನುವ ಕಾರಣಕ್ಕೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ರೌಫ್‌ ಶೇಖ್​ ತನ್ನ ಅಳಿಯ ಪಿಎಸ್​ಐ ಪುತ್ರ ಮುಸ್ತಕಿನ್ ಕೂಡಗಿ(28) ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್​ ಮಾಡಲಾಗಿದೆ. ತಮ್ಮ ಮಗಳು 5 ತಿಂಗಳ ಗರ್ಭಿಣಿ ಎನ್ನುವುದನ್ನೂ ನೋಡದೇ ಅಪ್ಪ ಮಗಳ ಬಾಳಿಗೆ ಕೊಳ್ಳಿ ಇಟ್ಟಿರುವ ಹೃದಯವಿದ್ರಾವಕ ಘಟನೆ ಇದಾಗಿದೆ.

ಮುಸ್ತಕಿನ್ ಕೂಡಗಿ ಅವರ ತಂದೆ ಗಾಂಧಿಚೌಕ್ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್​ಎಸ್​ ರಿಯಾಜ್ ಅಹಮದ್​. ಇವರ ಸಂಬಂಧಿ, ರೌಫ್‌ ಶೇಖ್​ರ ಮಗಳು ಅತೀಕಾಳನ್ನು ಈತ ಪ್ರೀತಿಸುತ್ತಿದ್ದ. ಇಬ್ಬರೂ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ತಂದೆ ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಪ್ರೇಮಿಗಳಿಬ್ಬರೂ 6 ತಿಂಗಳ ಹಿಂದೆ ಮದ್ವೆಯಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಗರ್ಭಿಣಿಯಾದ ಪತ್ನಿಯನ್ನು ಇತ್ತೀಚಿಗೆ ಊರಿಗೆ ವಾಪಸ್​ ಕರೆದುಕೊಂಡು ಬಂದು ತನ್ನ ಮನೆಯಲ್ಲೇ ವಾಸವಿದ್ದ.

ಫೆ.14ರಂದು ಹಾಡುಹಗಲೇ ವಿಜಯಪುರ ನಗರ ಹೊರವಲಯದ ರೇಡಿಯೋ ಕೇಂದ್ರದ ಬಳಿ ಸಿನಿಮೀಯ ರೀತಿಯಲ್ಲಿ ಮುಸ್ತಕಿನ್ ಕೂಡಗಿ ಅವರನ್ನ ದುಷ್ಕರ್ಮಿಗಳು ಕೊಂದಿದ್ದಾರೆ.

ನಿರ್ಮಾಣ ಹಂತದ ಮನೆ ಬಳಿಗೆ ಬೈಕ್​ನಲ್ಲಿ ಮುಸ್ತಕಿನ್​ ಹೋಗುತ್ತಿದ್ದರು. ಈ ವೇಳೆ ಬೈಕ್​ಗೆ ಬುಲೆರೋ ವಾಹನ ಡಿಕ್ಕಿ ಹೊಡೆಸಿ, ಬಳಿಕ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದ್ವೆಯಾದ ಬಳಿಕ ಮುಸ್ತಕಿನ್​ನ ಕೊಲೆಗೆ ಹಲವು ಬಾರಿ ಯತ್ನ ನಡೆದಿತ್ತಂತೆ. ಮದ್ವೆಯಾದ ಹೊಸತರಲ್ಲಿ ವಿಡಿಯೋ ಮಾಡಿದ್ದ ಅತೀಕಾ, ನನ್ನ ತಂದೆ ಹಾಗೂ ಸಹೋದರರಿಂದ ನನ್ನ ಪ್ರಿಯಕರ ಮುಸ್ತಕೀನ್ ಮತ್ತು ಇವರ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೂ, ಮುಸ್ತಕಿನ್​ ಮತ್ತು ನನ್ನ ಮಾವನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಅಳಲು ತೋಡಿಕೊಂಡಿದ್ದರು. ದಯವಿಟ್ಟು ನಮ್ಮನ್ನುಬದುಕಲು ಬಿಡಿ ಎಂದು ಅಪ್ಪನನ್ನ ಮಗಳು ಅತೀಕಾ ಬೇಡಿಕೊಂಡಿದ್ದಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಾಹನ ಹಾಯಿಸಿ ಬಳಿಕ ಯುವಕನನ್ನು ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆರಂಭದಲ್ಲಿ ಇದೊಂದು ಅಪಘಾತ ಎಂದೇ ತಿಳಿಯಲಾಗಿತ್ತು. ಆದರೆ, ಕೂಲಂಕುಷವಾಗಿ ತನಿಖೆ ನಡೆಸಲಾಗಿ ಇದೊಂದು ಉದ್ದೇಶ ಪೂರ್ವ ಕೃತ್ಯ ಎಂಬುದು ಕಂಡುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು