ಹಾವೇರಿ: ಮನುಷ್ಯ ತುರ್ತು ಸಂದರ್ಭದಲ್ಲಿ ರಕ್ತ ನೀಡಿ ಮತ್ತೊಬ್ಬನಿಗೆ ಜೀವದಾನ ನೀಡಿರುವ ಸಂಗತಿಯನ್ನು ಕೇಳಿರಬಹುದು. ಆದರೆ ಶ್ವಾನವೊಂದು ರಕ್ತದಾನ ಮಾಡಿದ ಸಂಗತಿ ವೈರಲ್ ಆಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾ| ಅಕ್ಕಿ ಆಲೂರು ಗ್ರಾಮದಲ್ಲಿ ಶ್ವಾನವೊಂದು, ಮತ್ತೊಂದು ಶ್ವಾನಕ್ಕೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದೆ. ಬಮ್ಮನಹಳ್ಳಿ ಗ್ರಾಮದ ರಂಜಿತ್ ಎಂಬುವರಿಗೆ ಸೇರಿದ ಸಿರಿ ಎಂಬ ಹೆಸರಿನ ಶ್ವಾನ ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನಕ್ಕೆ ರಕ್ತದಾನ ಮಾಡಿದೆ.
ಹಾನಗಲ್ ತಾ| ಹುಲ್ಲತ್ತಿ ಗ್ರಾಮದ ನಿವಾಸಿ ನಾಗರಾಜ್ ಗೊಲ್ಲರ ಎಂಬುವರ ಶ್ವಾನವೊಂದು ಅಕ್ಯೂಟ್ ಲೆಪ್ಟೊಸ್ಪೈರೋಸಿಸ್ ರೋಗದಿಂದ ಬಳಲುತ್ತಿತ್ತು. ಈ ಶ್ವಾನಕ್ಕೆ ರಕ್ತದಾನ ಮಾಡಿದ ಸಿರಿ ಎಂಬ ಸಾಕು ನಾಯಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ.