ಗದಗ: 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿ ಮೇಲೆ ವಿಜಯಕುಮಾರ್ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ನೋಡಿ ಒಳ ನುಗ್ಗಿದ ವಿಜಯಕುಮಾರ್ ಅತ್ಯಾಚಾರಕ್ಕೆ ಮುಂದಾಗಿದ್ದ. ಅತ್ಯಾಚಾರಕ್ಕೆ ಯತ್ನಿಸುವ ವೇಳೆ ಬಾಲಕಿ ಚಿರಾಡಿದ್ದಾಳೆ. ಬಾಲಕಿಯ ಚಿರಾಟ ಕೇಳಿ ಸ್ಥಳೀಯ ಮಹಿಳೆಯೊಬ್ಬರು ಮನೆಯೊಳಗೆ ಬಂದಾಗ, ಕಾಮುಕ ವಿಜಯಕುಮಾರ್ ಓಡಿ ಹೋಗಿದ್ದಾನೆ.
ಸಂತ್ರಸ್ತೆಯ ಪೋಷಕರು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿಜಯ್ ಕುಮಾರ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ.