News Karnataka Kannada
Thursday, May 02 2024
ಹುಬ್ಬಳ್ಳಿ-ಧಾರವಾಡ

ಮಹಿಳೆಯರು ವೈಜ್ಞಾನಿಕ ವಿಚಾರಗಳನ್ನು ಅಳವಡಿಸಿಕೊಳ್ಳಲು ಕರೆ

ಸಮಾಜವು ಹೆಣ್ಣುಮಕ್ಕಳನ್ನು ಅನಿಷ್ಟ ಕನಿಷ್ಟವೆಂದು ಪುರಷರಿಗಿಂತ ಕೀಳಾಗಿ ನಡೆದುಕೊಳ್ಳುತ್ತಿದ್ದಾರೆ. ಮೂಢನಂಬಿಕೆಯಿಂದಾಗಿ ಅಗೌರವಕ್ಕೆ ಒಳಪಡಿಸಿದ್ದರಿಂದ ಹೆಚ್ಚಿನ ಭ್ರೂಣ ಹತ್ಯೆಗಳು ನಡೆಯುತ್ತಿವೆ ಎಂದು ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ಜಿಲ್ಲಾ ನ್ಯಾಯಾಧಿಶ ಪರಶುರಾಮ ಎಫ್. ದೊಡ್ಡಮನಿ ಅವರು ಹೇಳಿದರು.
Photo Credit : News Kannada

ಧಾರವಾಡ: ಸಮಾಜವು ಹೆಣ್ಣುಮಕ್ಕಳನ್ನು ಅನಿಷ್ಟ ಕನಿಷ್ಟವೆಂದು ಪುರಷರಿಗಿಂತ ಕೀಳಾಗಿ ನಡೆದುಕೊಳ್ಳುತ್ತಿದ್ದಾರೆ. ಮೂಢನಂಬಿಕೆಯಿಂದಾಗಿ ಅಗೌರವಕ್ಕೆ ಒಳಪಡಿಸಿದ್ದರಿಂದ ಹೆಚ್ಚಿನ ಭ್ರೂಣ ಹತ್ಯೆಗಳು ನಡೆಯುತ್ತಿವೆ ಎಂದು ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ಜಿಲ್ಲಾ ನ್ಯಾಯಾಧಿಶ ಪರಶುರಾಮ ಎಫ್. ದೊಡ್ಡಮನಿ ಅವರು ಹೇಳಿದರು.

ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಲಾದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಮಹಿಳಾ ಮತ್ತು ಅನೈತಿಕ ಸಾಗಾಣಿಕೆ ಹಾಗೂ ಪಿಎನ್‍ಡಿಟಿ-ಆ್ಯಕ್ಟ್ 1994ರ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಮಹಿಳೆಯರನ್ನು ನಮ್ಮ ಭಾರತ ಸಂಸ್ಕತಿಯಲ್ಲಿ ಗೌರವಿಸಿ, ನದಿ ಹಾಗೂ ಭೂಮಿಯನ್ನು ತಾಯಿಗೆ ಹೊಲಿಸಲಾಗಿದೆ. ಸಮಾಜದಲ್ಲಿ ಯಾರನ್ನ ಗೌರವಿಸಬೇಕು, ಯಾರನ್ನು ಆದರ್ಶವಾಗಿರಿಸಿಕೊಳ್ಳಬೇಕು ಅವರನ್ನು ನಾವು ಮೂಲೆಗೆ ತಳ್ಳಿದ್ದೇವೆ. ಸುಳ್ಳುಗಳನ್ನು ಸೃಷ್ಟಿಸಿ ಅದಕ್ಕೆ ವೈಭವಿಕರಣ ಮಾಡಿ ಅದನ್ನೇ ವಿಜೃಂಭಿಸಿ ಜನರ ತಲೆಯ ಒಳಗೆ ಅವೈಜ್ಞಾನಿಕ, ಮೂಢನಂಬಿಕೆಗಳನ್ನು ತುಂಬಿ ಮಹಿಳೆಯರನ್ನು ಗೌರವ ಸ್ಥಾನದಿಂದ ದೂರವಿಡಲಾಗಿದೆ ಎಂದು ಹೇಳಿದರು.

ಜನರು ಗ್ರಹಣದ ಸಂದರ್ಭದಲ್ಲಿ ಹೆಚ್ಚಾಗಿ ಮೂಢನಂಬಿಕೆಗೆ ಒತ್ತು ಕೊಟ್ಟು, ಮನೆಯಲ್ಲಿ ನೀರು ಕುಡಿಯಬಾರದು, ಊಟ ಮಾಡಬಾರದು, ಮನೆಯ ಹೊರಗಡೆ ಹೋಗಬಾರದು, ಗ್ರಹಣದ ಸಂದರ್ಭದಲ್ಲಿ ಮನೆಯಲ್ಲಿರುವ ನೀರು ಚೆಲ್ಲುವುದು ಎಂಬ ಹಲವಾರು ಮೂಢನಂಬಿಕೆಗಳ ಜೊತೆ ವಾಸ್ತವದ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.

ಇಂದಿನ ಯುಗದಲ್ಲಿ ಆಕಾಶಕ್ಕೆ ರಾಕೆಟ್ ಹಾರಿಸುತ್ತೇವೆ, ಮಂಗಳ ಗ್ರಹಕ್ಕೆ ಮಾನವನನ್ನು ಕಳಿಸುತ್ತಿದ್ದೇವೆ ಹೀಗೆ ತಂತ್ರಜ್ಞಾನಗಳು ಮುಂದುವರೆದರು ಸಹ ಜನರಲ್ಲಿರುವ ಮೌಡ್ಯತೆಗಳು ಕಡಿಮೆಯಾಗಲು ಸಾದ್ಯವಾಗಿಲ್ಲ. ಮಹಿಳೆಯರು ಸಮಾಜದಲ್ಲಿ ನಡೆಯುವಂತಹ ಘಟನೆಗಳಿಗೆ ಕಿವಿ ಕೊಡದೆ ವೈಜ್ಞಾನಿಕವಾಗಿ ಚಿಂತಿಸಿ ಜೀವನ ನಡೆಸುವುದು ಪ್ರಮುಖವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಭ್ರೂಣಹತ್ಯೆ ಕಂಡುಬರುತ್ತಿವೆ. ಭ್ರೂಣಹತ್ಯೆ ಮಾಡುವುದು ಕೊಲೆಯ ಪ್ರಕರಣಕೀಂತ ಗಂಭೀರವಾದ ಅಪರಾಧವಾಗಿದೆ ಎಂದು ಹೇಳಿದರು.

ಬಸವಣ್ಣನವರು ಸಮಾಜದಲ್ಲಿ ನಡೆಯುತ್ತಿದ್ದ ಗಂಡು, ಹೆಣ್ಣು ಎಂಬ ಲಿಂಗ ತಾರತಮ್ಯದ ವಿರುದ್ಧ 900 ವರ್ಷಗಳ ಹಿಂದೆಯೇ ಸಮಾನತೆಗಾಗಿ ಶ್ರಮಿಸಿದರು. ಪ್ರತಿಯೊಬ್ಬರು ಬಸವಣ್ಣನವರ ಆದರ್ಶಗಳನ್ನು ಪಾಲಿಸಬೇಕು. ಮನೆಯಲ್ಲಿ ಮಕ್ಕಳಿಗೆ ಬಸವಣ್ಣನವರ ವಚನ ಮತ್ತು ಕತೆಗಳನ್ನು ಹೇಳಬೇಕು. ಅವಾಗ ಮಾತ್ರ ವೈಜ್ಞಾನಿಕವಾಗಿ ಜೀವಿಸಲು ಸಾಧ್ಯ. ಭಾರತದಲ್ಲಿ ಮೊದಲ ಶಿಕ್ಷಕಿ ಸಾವಿತ್ರಿಭಾಯಿ ಪೂಲೆ ಅವರು ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳಿಗೆ ದೇವಾಲಯ, ಗುರುಕುಲ, ಮರದಕೆಳಗೆ ಶಿಕ್ಷಣ ನೀಡುತ್ತಿದ್ದರು ಅವರ ಆದರ್ಶ ತತ್ವಗಳನ್ನು ಇಂದಿಗೂ ಮಹಿಳೆಯರು ಪಾಲಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ಜಿಲ್ಲಾ ನ್ಯಾಯಾಧಿಶ ಪರಶುರಾಮ ಎಫ್. ದೊಡ್ಡಮನಿ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಶಿ ಪಾಟೀಲ ಅವರು ಮಾತನಾಡಿ, ಹಳ್ಳಿಗಳಲ್ಲಿ ಬಾಲ್ಯ ವಿವಾಹವು ಹೆಚ್ಚಾಗಿ ಕಂಡು ಬರುತ್ತಿದೆ. ಒಂದು ಸಾವಿರ ಪುರುಷರಿಗೆ 937 ಹೆಣ್ಣು ಮಕ್ಕಳ ಸಂಖ್ಯೆ ಇದೆ, ಹಳ್ಳಿಗಳಲ್ಲಿ, ದೊಡ್ಡ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಹೆಣ್ಣು ಭ್ರೂಣ ಹತ್ಯೆ ಕಂಡುಬರುತ್ತಿದೆ. ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಹೆಣ್ಣು ಮಕ್ಕಳು ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವನ್ನು ಹೊಂದಿ, ಗುರುತಿಸಿಕೊಳ್ಳಲು ಅವಕಾಶ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ವರೂಪ ಟಿ.ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು, ಹರೀಶ್ ಜೋಗಿ, ನೂರಜಹಾನ ಕಿಲ್ಲೇದಾರ, ತನುಜಾ ಕೆ.ಎನ್ ಅವರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ.ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು