ಭೋಪಾಲ್: ಹೆಡ್ ಕಾನ್ಸ್ಟೆಬಲ್ ಒಬ್ಬರು ಕಂಠಪೂರ್ತಿ ಕುಡಿದು ಇನ್ನೊಬ್ಬ ಕುಡುಕನ ಜೊತೆ ರಸ್ತೆ ಬದಿ ನಿಲ್ಲಿಸಲಾಗಿದ್ದ ತಳ್ಳುವ ಗಾಡಿಯಲ್ಲಿ ಒಟ್ಟಾಗಿ ಮಲಗಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಜಬಲ್ಪುರ್ ನಾಕಾ ಬಳಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಇದರ ವಿಡಿಯೋ ವೈರಲಲ್ ಆಗ್ತಿದೆ.
ಮದ್ಯಪಾನ ಮಾಡಿದ ಹೆಡ್ ಕಾನ್ಸ್ಟೆಬಲ್ ಕರ್ತವ್ಯಕ್ಕೆ ಹಾಜರಾಗದೇ ಜಬಲ್ಪುರ್ ನಾಕಾ ಬಳಿಯ ಮಾರ್ಕೆಟ್ ರಸ್ತೆ ಬದಿ ನಿಲ್ಲಿಸಲಾಗಿದ್ದ ತಳ್ಳುವ ಗಾಡಿಯಲ್ಲಿ ಮತ್ತೊಬ್ಬ ಕುಡುಕನ ಜೊತೆ ಮಲಗಿದ್ದಾರೆ. ಇನ್ನೊಬ್ಬ ಕುಡಕನಿಗೆ ಕೈಯೊಂದು ಇಲ್ಲದಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ಆದರೆ ಯೂನಿಫಾರ್ಮ್ನಲ್ಲಿ ಕಾನ್ಸ್ಟೆಬಲ್ ಮಲಗಿರುವುದು ಸದ್ಯ ಪೊಲೀಸ್ ಸಿಬ್ಬಂದಿಗೆ ಮುಜುಗರ ಉಂಟು ಮಾಡಿದೆ.
ಇನ್ನು ಆ ಗಾಡಿಯಲ್ಲಿ ಮಲಗಿರುವ ಪೊಲೀಸ್ ಸಿಬ್ಬಂದಿ ಯಾರೆಂದು ಪತ್ತೆ ಮಾಡಲಾಗುತ್ತಿದೆ. ಯಾವ ಸಂದರ್ಭದಲ್ಲಿ ಈ ವಿಡಿಯೋ ಮಾಡಲಾಗಿದೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಪೊಲೀಸ್ ಇಲಾಖೆಯವರೇ ಮದ್ಯಪಾನ ಮಾಡಿ ಈ ರೀತಿ ಮಾಡಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಸ್ಪಿ ಅಭಿಷೇಕ್ ತಿವಾರಿ ತಿಳಿಸಿದ್ದಾರೆ.
तू भी शराबी, मैं भी शराबी…
यह वीडियो #MP के #Damoh जिला मुख्यालय के जबलपुर नाका का है
जहाँ हेड कॉन्स्टेबल अपने परम मित्र के साथ ठेले पर सोये नजर आये pic.twitter.com/zro0m8nNLk— नेहा 🌙 (@n3ha_y) February 28, 2024