News Karnataka Kannada
Friday, May 10 2024
ಹುಬ್ಬಳ್ಳಿ-ಧಾರವಾಡ

ಮುಕ್ತ ಮತ್ತು ಪಾರದರ್ಶಕ ಚುನಾವಣೆಗೆ ಸಿಬ್ಬಂದಿ ಬೆನ್ನೆಲುಬು- ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Staff are the backbone of free and transparent elections: Deputy Commissioner Gurudatta Hegde
Photo Credit : News Kannada

ಧಾರವಾಡ: ಚುನಾವಣೆಗಳನ್ನು ನ್ಯಾಯಸಮ್ಮತವಾಗಿ ಮತ್ತು ನಿಯಮಾನುಸಾರ ಜರುಗಿಸಲು ಚುನಾವಣಾ ಕರ್ತವ್ಯಕ್ಕೆ ನೇಮಕವಾದ ಅಧಿಕಾರಿ ಸಿಬ್ಬಂದಿಗಳು ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಕಾನೂನಾತ್ಮಕವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಸಭಾಭವನದಲ್ಲಿ ಜಿಲ್ಲಾಡಳಿತ ಕರ್ನಾಟಕ ಸಾರ್ವತ್ರಿಕ ಚುನಾವಣೆ-23ರ ಚುನಾವಣೆಗೆ ನೇಮಕವಾದ ಚುನಾವಣಾಧಿಗಳು, ಸಹಾಯಕ ಚುನಾವಣಾಧಿಕಾರಿಗಳು ಮತ್ತು ಸೆಕ್ಟರ್ ಆಫೀಸರ್, ಎಪ್. ಎಸ್.ಟಿ., ಎಸ್. ಎಸ್.ಟಿ., ವಿ.ಎಸ್.ಟಿ, ವಿ.ವಿ.ಟಿ ಹಾಗೂ ಸಹಾಯಕ ವೆಚ್ಚ ವೀಕ್ಷಕರು, ಅಕೌಂಟ್ಸ್ ತಂಡಗಳ ಸದಸ್ಯರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ಚುನಾವಣೆಗಳನ್ನು ಮುಕ್ತ ಮತ್ತು ಪಾರದರ್ಶಕವಾಗಿ ನಡೆಸಲು ಸೇವೆಗೆ ಸಮರ್ಪಿತ (ಡೆಡಿಕೆಟೆಡ್) ಸಿಬ್ಬಂದಿಗಳ ಅಗತ್ಯವಿದೆ. ಚುನಾವಣಾ ಕರ್ತವ್ಯ ಪವಿತ್ರ ಕಾರ್ಯ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಪ್ರತಿಯೊಬ್ಬರು ತಮ್ಮ ವಯಕ್ತಿಕ ಗುರುತುಗಳನ್ನು ಬಿಟ್ಟು ನಿಷ್ಪಕ್ಷಪಾತವಾಗಿರಬೇಕು.

ಎಲ್ಲ ಇಲಾಖೆ ಅಧಿಕಾರಿಗಳು ಒಂದು ತಂಡವಾಗಿ ಕಾರ್ಯ ಮಾಡಬೇಕು. ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ಕರ್ತವ್ಯನಿರತ ಎಲ್ಲ ತಂಡಗಳು ಪರಸ್ಪರ ಸಂಪರ್ಕದಲ್ಲಿದ್ದು, ಸಮನ್ವಯತೆಯಿಂದ ಕಾರ್ಯ ನಿರ್ವಹಸಿಬೇಕೆಂದು ಅವರು ಹೇಳಿದರು.

ಯಾವುದೇ ರೀತಿಯ ಚುನಾವಣಾ ಅಕ್ರಮಗಳು ನಡೆಯದಂತೆ ತೀವ್ರ ನಿಗಾವಹಿಸಿ, ತರಬೇತಿಯಲ್ಲಿ ನೀಡುವ ಮಾಹಿತಿ ಹಾಗೂ ಚುನಾವಣಾ ಆಯೋಗದ ಹ್ಯಾಂಡ್ ಬುಕ್ಕ್ ಗಳನ್ನು ಓದಿ, ಅನುಸರಿಸಬೇಕು ಎಂದರು.

ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಮಾತನಾಡಿ, ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ಪ್ರತಿ ಸಿಬ್ಬಂದಿ ತಮಗೆ ವಹಿಸಿದ ಕರ್ತವ್ಯವನ್ನು ಪ್ರಾಮಾಣಿಕತೆ ಮತ್ತು ಚುನಾವಣಾ ನಿಯಮಗಳಿಗೆ ಅನುಸಾರವಾಗಿ ನುರ್ವಹಿಸಬೇಕು. ಪೊಲೀಸ್ ಸಿಬ್ಬಂದಿ ಚುನಾವಣಾ ತಂಡಗಳಲ್ಲಿದ್ದು, ಅಗತ್ಯ ಕಾರ್ಯ ಮಾಡುತ್ತಿದೆ. ನಿಯೋಜಿತ ಸಿಬ್ಬಂದಿಗಳು ಒಟ್ಟಾಗಿ ನಿಯಮಾನುಸಾರ ಕೆಲಸ ಮಾಡುವದರಿಂದ ಮುಕ್ತ, ನ್ಯಾಯಸಮ್ಮತ ಚುನಾವಣೆ ಸಾಧ್ಯವಾಗುತ್ತವೆ ಎಂದು ಅವರು ಹೇಳಿದರು.

ಕಾರ್ಯಾಗಾರದಲ್ಲಿ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಜಂಟಿ ಆಯುಕ್ತ ನಾಗರಾಜರಾವ್ ಬಿ., ರಾಜ್ಯ ತರಬೇತಿದಾರ ಪ್ರೊ ಎನ್.ವಿ. ಶಿರಗಾಂವಕರ ಚುನಾವಣೆ ಕಾರ್ಯದ ಕುರಿತು ವಿಶೇಷ ಉಪನ್ಯಾಸ ಮತ್ತು ತರಬೇತಿ ನೀಡಿದರು.

ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳಾದ ಡಾ.ಗೋಪಾಲ ಕೃಷ್ಣ. ಬಿ., ಭರತ ಎಸ್.,ಎಸ್.ಎಸ್.ಸಂಪಗಾಂವಿ, ವಿನೋದಕುಮಾರ ಹೆಗ್ಗಳಗಿ, ಶ್ರವಣಕುಮಾರ ನಾಯಕ್, ಬಸವರಾಜ ಹೆಗ್ಗನಾಯಕ್ ಎಂ.ಸಿ.ಸಿ ಜಿಲ್ಲಾ ನೊಡಲ್ ಅಧಿಕಾರಿ ಯಶಪಾಲ ಕ್ಷೀರಸಾಗರ, ಜಿಲ್ಲಾ ಮತದಾರಪಟ್ಟಿ ನೊಡಲ್ ಅಧಿಕಾರಿ ಡಾ.ಸಂತೋಷಕುಮಾರ ಬಿರಾದಾರ ವೇದಿಕೆಯಲ್ಲಿದ್ದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಚುನಾವಣಾಧಿಕಾರಿ ಡಾ.ಮೋಹನ ಭಸ್ಮೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ಏಳು ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡ ವಿವಿಧ ತಂಡಗಳ ಸದಸ್ಯರು, ಪೊಲೀಸ್ ಸೆಕ್ಟರ್ ಆಫೀಸರ್, ಎಂ.ಸಿ.ಸಿ ನೊಡಲ್ ಅಧಿಕಾರಿಗಳು ಭೌತಿಕವಾಗಿ ಮತ್ತು ಕರ್ತವ್ಯನಿರತ ಸಿಬ್ಬಂದಿಗಳು ವೇಬೇಕ್ಸ್ ಮೂಲಕ ಹಾಜರಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು