News Karnataka Kannada
Sunday, April 28 2024
ಹುಬ್ಬಳ್ಳಿ-ಧಾರವಾಡ

ಮಹಾಯೋಗಿ ವೇಮನರ ಸಾಹಿತ್ಯ, ಸಂಶೋಧನೆ ಕಾರ್ಯ ನಿರಂತರವಾಗಿರಲಿ: ಸಚಿವ ಎಚ್.ಕೆ.ಪಾಟೀಲ

ಮಹಾಯೋಗಿ ವೇಮನ ಸಾಹಿತ್ಯ, ಸಂಶೋಧನೆ ಕುರಿತು ಹೆಚ್ಚಿನ ಕಾರ್ಯಗಳು ಆಗಬೇಕು. ವೇಮನ ಅಧ್ಯಯನ ಪೀಠದಿಂದ ವಿದ್ಯಾರ್ಥಿನಿಲಯ ಸ್ಥಾಪಿಸಲು ಕವಿವಿಯಿಂದ ಪ್ರಸ್ತಾವನೆ ಸಲ್ಲಿಸಿದರೆ, ಸರಕಾರ ಸಹಾಯ ಮಾಡಲಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು.
Photo Credit : News Kannada

ಧಾರವಾಡ: ಮಹಾಯೋಗಿ ವೇಮನ ಸಾಹಿತ್ಯ, ಸಂಶೋಧನೆ ಕುರಿತು ಹೆಚ್ಚಿನ ಕಾರ್ಯಗಳು ಆಗಬೇಕು. ವೇಮನ ಅಧ್ಯಯನ ಪೀಠದಿಂದ ವಿದ್ಯಾರ್ಥಿನಿಲಯ ಸ್ಥಾಪಿಸಲು ಕವಿವಿಯಿಂದ ಪ್ರಸ್ತಾವನೆ ಸಲ್ಲಿಸಿದರೆ, ಸರಕಾರ ಸಹಾಯ ಮಾಡಲಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು.

ಅವರು ಕವಿವಿಯ ಮಹಾಯೋಗಿ ವೇಮನ ಪೀಠದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನರ ಜಯಂತ್ಯೋತ್ಸವ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ವೇಮನರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮಹಾಯೋಗಿ ವೇಮನ ಪೀಠ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿದೆ. ವೇಮನರ ಸಾಹಿತ್ಯ,ಸಂದೇಶಗಳ ಅನುವಾದ ಲೇಖಕಕರಾದ ಎಸ್.ಆರ್.ಪಾಟೀಲ ಅವರ ವೇಮನ ಸಾಹಿತ್ಯ ಇಂದು ದಾರಿ ಆಗಿದೆ. ಕವಿವಿ ವೇಮನ ಪೀಠದಿಂದ ಜನಸಾಮಾನ್ಯರಿಗೆ ತಲುಪುವಂತೆ ವೇಮನರ ಜೀವನ ತತ್ತ್ವ, ಸಂದೇಶಗಳನ್ನು ಸರಳವಾದ ಭಾಷೆಯಲ್ಲಿ, ಸಣ್ಣ ಪುಸ್ತಕಗಳನ್ನಾಗಿ ರಚಿಸಿ, ವಿತರಿಸಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಮಹಾಯೋಗಿ ವೇಮನ ಪೀಠದಲ್ಲಿ ಸಂಶೋಧನೆ, ಅಧ್ಯಯನ ಬೆಳೆಯಬೇಕು. ಮುಂದಿನ ದಿನಗಳಲ್ಲಿ 50 ವಿದ್ಯಾರ್ಥಿಗಳ ಅನುಕೂಲವಾಗುವಂತೆ ವಸತಿನಿಲಯ ಸ್ಥಾಪಿಸಲು ಸರಕಾರ ಸಹಕಾರ ನೀಡಲಿದೆ ಎಂದು ಸಚಿವರು ತಿಳಿಸಿದರು.

ಬಸವಣ್ಣನವರ ಜಾತಿರಹಿತ ಸಮಾಜ ರಚನೆ ಅದ್ಭುತವಾಗಿತ್ತು. ಮನುಕುಲದ ಒಳಿತಿಗಾಗಿ ಬಸವಣ್ಣನವರು ಶ್ರಮಿಸಿದ್ದಾರೆ. ಬಸವಣ್ಣನವರು ಈಗ ಕರ್ನಾಟಕದ ಸಾಂಸ್ಕತಿಕ ರಾಯಬಾರಿ, ನಾಯಕ. ಅವರ ಚರಿತ್ರೆ ಕನ್ನಡ ನಾಡಿನ ಇತಿಹಾಸವಾಗಿದೆ ಎಂದು ಸಚಿವರು ತಿಳಿಸಿದರು.

ಇಡೀ ವಿಶ್ವಕ್ಕೆ ಬಸವಣ್ಣವರ ಬಗ್ಗೆ ಪರಿಚಯಿಸಿದ್ದು, ಅವರ ಸಾಕಷ್ಟು ಸಂದೇಶಗಳನ್ನು ತಲುಪಿಸಿದ ಮಹತ್ತರ ಕಾರ್ಯವು ಕವಿವಿ ಶ್ರೇಯಸ್ಸಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಕರ್ನಾಟಕ ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಮಹಾಯೋಗಿ ವೇಮನ ಪೀಠವು ಕವಿವಿಯ ಇತರ ಪೀಠಗಳಿಗೆ ಮಾದರಿಯಾಗಿದೆ. ಹಿರಿಯ ಲೇಖಕ ಎಸ್.ಆರ್.ಪಾಟೀಲರು ತೆಲುಗು ಭಾಷಯಲ್ಲಿರುವ ಮಹಾಯೋಗಿ ವೇಮನರ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಿದ್ದರಿಂದ ಕನ್ನಡ ಸಾಹಿತ್ಯ ಮತ್ತು ಮಹಾಯೋಗಿ ವೇಮನರ ಶ್ರೀಮಂತವಾದ ಚರಿತ್ರೆ ಇಂದು ಮನೆಮಾತಾಗಿದೆ ಎಂದರು.

ನಾಡಿನ ಮಹಾನ ಪುರುಷರನ್ನು, ಮಹಾತ್ಮರನ್ನು ಯಾವುದೇ ಜಾತಿಗಳಿಗೆ ಸೀಮಿತಗೊಳಿಸಬಾರದು. ಮಹಾತ್ಮರ ಸಂದೇಶಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಎರೆಹೊಸಳ್ಳಿಯ ಮಹಾಯೋಗಿ ವೇಮನ ಸಂಸ್ಥಾನಮಠ ರಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ, ಆಶಿರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್.ಕೋನರಡ್ಡಿ, ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಡಿ.ಆರ್.ಪಾಟೀಲ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಕೆ.ಎಲ್.ಪಾಟೀಲ, ರಮೇಶ ಜಂಗಲ, ರಘುನಾಥ ಸಾಹುಕಾರ, ಜೆ.ಕೆ.ಜಮಾದಾರ, ಡಾ.ಗೋವಿಂದ ಮಣ್ಣೂರ, ರಘು ಲಕ್ಕಣ್ಣವರ, ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ಮಾತನಾಡಿದರು. ರಾಮದುರ್ಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿದ್ದಣ್ಣ ಲಂಗೋಟಿ ಅವರು ಮಹಾಯೋಗಿ ಶ್ರೀ ವೇಮನರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅತಿಥಿಗಳಾಗಿ ಕವಿವಿ ಮೌಲ್ಯಮಾಪನ ಕುಲಸಚಿವ ಡಾ.ಎನ್.ವೈ.ಮಟ್ಟಿಹಾಳ, ಸಿಂಡಿಕೇಟ್ ಮಾಜಿ ಸದಸ್ಯ ವಸಂತ ಲದ್ವಾ, ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಡಾ.ಕೃ.ಅನ್ಬನ್, ಎಫ್.ಎಚ್.ಜಕ್ಕಪ್ಪನವರ, ಪ್ರತಾಪ ಚವ್ಹಾನ, ವಸಂತ ಅರ್ಕಾಚಾರಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಕುಲಸಚಿವ ಎ.ಚನ್ನಪ್ಪ ಸ್ವಾಗತಿಸಿದರು. ಮಹಾಯೋಗಿ ವೇಮನ ಪೀಠದ ಸಂಯೋಜಕ ಡಾ.ಎಚ್.ಬಿ.ನೀಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಮಾ ಅಂಕಲಗಿ ಅವರು ವೇಮನರ ಕುರಿತ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಮಹಾಯೋಗಿ ವೇಮನ ಪೀಠದ ಅಧ್ಯಾಪಕರು, ವಿದ್ಯಾರ್ಥಿಗಳು, ರಡ್ಡಿ ಸಮುದಾಯದ ಪ್ರಮುಖರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು