News Karnataka Kannada
Tuesday, May 07 2024
ಹುಬ್ಬಳ್ಳಿ-ಧಾರವಾಡ

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 18,31,975 ಮತದಾರರಿದ್ದಾರೆ: ದಿವ್ಯಪ್ರಭು

ಭಾರತ ಚುನಾವಣಾ ಆಯೋಗ ಅಂತಮವಾಗಿ ಏಪ್ರಿಲ್ 19, 2024 ರಂದು ಪ್ರಕಟಿಸಿರುವ ಮತದಾರ ಪಟ್ಟಿಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಮತಕ್ಷೇತ್ರಗಳು ಸೇರಿ 9,17,926 ಪುರುಷ, 9,13,949 ಮಹಿಳಾ, 100 ತೃತೀಯಲಿಂಗಗಳು ಸೇರಿ ಒಟ್ಟು 18,31,975 ಮತದಾರರಿದ್ದು, ಇವರೆಲ್ಲರೂ ಮೇ 7 ರಂದು ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.
Photo Credit : NewsKarnataka

ಧಾರವಾಡ : ಭಾರತ ಚುನಾವಣಾ ಆಯೋಗ ಅಂತಮವಾಗಿ ಏಪ್ರಿಲ್ 19, 2024 ರಂದು ಪ್ರಕಟಿಸಿರುವ ಮತದಾರ ಪಟ್ಟಿಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಮತಕ್ಷೇತ್ರಗಳು ಸೇರಿ 9,17,926 ಪುರುಷ, 9,13,949 ಮಹಿಳಾ, 100 ತೃತೀಯಲಿಂಗಗಳು ಸೇರಿ ಒಟ್ಟು 18,31,975 ಮತದಾರರಿದ್ದು, ಇವರೆಲ್ಲರೂ ಮೇ 7 ರಂದು ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು 47,204 ಜನ ಹೊಸದಾಗಿ ನೋಂದಾಯಿತ ಯುವ ಮತದಾರರು, ವಿಕಲಚೇತನರಾದ 25,787 ಹಾಗೂ 18,626 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಮತದಾರ ಪಟ್ಟಿಯಲ್ಲಿದ್ದಾರೆ.

ಇತರೆ ವಿಧಾನಸಭಾ ಮತಕ್ಷೇತ್ರಗಳಿಗೆ ಹೊಲಿಕೆ ಮಾಡಿದಾಗ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದಲ್ಲಿ 3,789 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 5.172 ಜನ ವಿಕಲಚೇತನರು ಮತ್ತು 6,556 ಯುವ ಮತದಾರರು ಹೆಚ್ಚಿದ್ದಾರೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 18,31,975 ಜನ ಮತದಾರರು:
11-ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 18,31,975 ಜನ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

69-ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,07,301 ಪುರುಷರು, 1,05,767 ಮಹಿಳೆಯರು ಮತ್ತು ತೃತೀಯಲಿಂಗ 9 ಸೇರಿ ಒಟ್ಟು 2,13,077 ಮತದಾರರಿದ್ದಾರೆ. 70-ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 97,720 ಪುರುಷರು, 93,681 ಮಹಿಳೆಯರು ಮತ್ತು ತೃತೀಯಲಿಂಗ 8 ಸೇರಿ ಒಟ್ಟು 1,91,409 ಮತದಾರರಿದ್ದಾರೆ. 71-ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,12,362 ಪುರುಷರು, 1,12,454 ಮಹಿಳೆಯರು ಮತ್ತು ತೃತೀಯಲಿಂಗ 10 ಸೇರಿ ಒಟ್ಟು 2,24826 ಮತದಾರರಿದ್ದಾರೆ. ಈ ಮತಕ್ಷೇತ್ರದಲ್ಲಿ ಪುರುಷರಿಗಿಂತ 92 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

72- ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,09,913 ಪುರುಷರು, 1,12,297 ಮಹಿಳೆಯರು ಮತ್ತು ತೃತೀಯಲಿಂಗ 17 ಸೇರಿ ಒಟ್ಟು 2,22,227 ಮತದಾರರಿದ್ದಾರೆ. ಈ ಮತಕ್ಷೇತ್ರದಲ್ಲಿ ಪುರುಷರಿಗಿಂತ 2,384 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,31,763 ಪುರುಷರು, 1,35,451 ಮಹಿಳೆಯರು ಮತ್ತು ತೃತೀಯಲಿಂಗ 37 ಸೇರಿ ಒಟ್ಟು 2,67,251 ಮತದಾರರಿದ್ದಾರೆ. ಈ ಮತಕ್ಷೇತ್ರದಲ್ಲಿ ಪುರಷರಿಗಿಂತ 3,688 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. 74-ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,37,037 ಪುರುಷರು, 1,43,030 ಮಹಿಳೆಯರು ಮತ್ತು ತೃತೀಯಲಿಂಗ 6 ಸೇರಿ ಒಟ್ಟು 2,80,073 ಮತದಾರರಿದ್ದಾರೆ. ಈ ಮತಕ್ಷೇತ್ರದಲ್ಲಿ ಪುರುಷರಿಗಿಂತ 5,993 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

74-ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,02,457 ಪುರುಷರು, 97,484 ಮಹಿಳೆಯರು ಮತ್ತು ತೃತೀಯಲಿಂಗ 6 ಸೇರಿ ಒಟ್ಟು 1,99,974 ಮತದಾರರಿದ್ದಾರೆ. ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಾವೇರಿ ಜಿಲ್ಲೆಯ 83-ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 1,19,373 ಪುರುಷರು, 1,13,785 ಮಹಿಳೆಯರು ಮತ್ತು ತೃತೀಯಲಿಂಗ 7 ಸೇರಿ ಒಟ್ಟು 2,33,165 ಮತದಾರರಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 9,17,926 ಪುರುಷರು, 9,13,949 ಮಹಿಳೆಯರು ಮತ್ತು ತೃತೀಯಲಿಂಗ 100 ಸೇರಿ ಒಟ್ಟು 18,31,975 ಮತದಾರರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 47,204 ಯುವ ಮತದಾರರು:
11 ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 47,204 ಯುವ ಮತದಾರರು ನೊಂದಣಿಯಾಗಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರದ 69-ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2,770 ಯುವಕರು, 2,591 ಯುವತಿಯರು ಸೇರಿ ಒಟ್ಟು 5,361 ಮತದಾರರಿದ್ದಾರೆ. 70-ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2,877 ಯುವಕರು 2,520 ಯುವತಿಯರು, ತೃತೀಯಲಿಂಗ 1 ಸೇರಿ ಒಟ್ಟು 5,398 ಮತದಾರರಿದ್ದಾರೆ.

71-ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,325 ಯುವಕರು, 2675 ಯುವತಿಯರು ಸೇರಿ ಒಟ್ಟು 6,000 ಮತದಾರರಿದ್ದಾರೆ. 72-ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2,655 ಯುವಕರು, 2408 ಯುವತಿಯರು, ತೃತೀಯಲಿಂಗ 3 ಸೇರಿ ಒಟ್ಟು 5,066 ಮತದಾರರಿದ್ದಾರೆ. 73-ಹುಬ್ಬಳ್ಳಿ -ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2,834 ಯುವಕರು, 2,657 ಯುವತಿಯರು ಸೇರಿ ಒಟ್ಟು 5,491 ಮತದಾರರಿದ್ದಾರೆ.

74-ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,103 ಯುವಕರು 2,844 ಯುವತಿಯರು ಸೇರಿ ಒಟ್ಟು 5,947 ಮತದಾರರಿದ್ದಾರೆ. 75-ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,486 ಯುವಕರು 3,070 ಯುವತಿಯರು ಸೇರಿ ಒಟ್ಟು 6,556 ಮತದಾರರಿದ್ದಾರೆ. 11-ಧಾರವಾಡ ಮತಕ್ಷೇತ್ರ ವಾಪ್ತಿಯಲ್ಲಿ ಬರುವ ಹಾವೇರಿ ಜಿಲ್ಲೆಯ 83-ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,955 ಯುವಕರು, 3,429 ಯುವತಿಯರು, ತೃತೀಯಲಿಂಗ 1 ಸೇರಿ ಒಟ್ಟು 7,385 ಮತದಾರರಿದ್ದಾರೆ.

ಧಾರವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 25,005 ಯುವಕರು, 22,194 ಯುವತಿಯರು ಮತ್ತು ತೃತೀಯಲಿಂಗ 5 ಸೇರಿ ಒಟ್ಟು 47,204 ಮತದಾರರು ನೋಂದಾಯಿತರಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ,

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 25,787 ವಿಕಲಚೇತನ ಮತದಾರರು:
11-ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 25787 ವಿಕಲಚೇತನ ಮತದಾರರು ನೊಂದಣಿಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರದ 69-ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ, 1961 ಪುರುಷರು, 1,330 ಮಹಿಳೆಯರು ಸೇರಿ ಒಟ್ಟು 3,291 ಮತದಾರರಿದ್ದಾರೆ. 70-ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲ್ಲಿ 1,990 ಪುರುಷರು, 1,498 ಮಹಿಳೆಯರು ಸೇರಿ ಒಟ್ಟು 3,488 ಮತದಾರರಿದ್ದಾರೆ. 71-ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲ್ಲಿ 2,068 ಪುರುಷರು, 1,505 ಮಹಿಳೆಯರು ಸೇರಿ ಒಟ್ಟು 3,573 ಮತದಾರರಿದ್ದಾರೆ.

72-ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲ್ಲಿ 991 ಪುರುಷರು, 8,54 ಮಹಿಳೆಯರು ಸೇರಿ ಒಟ್ಟು 1,845 ಮತದಾರರಿದ್ದಾರೆ. 73-ಹುಬ್ಬಳ್ಳಿ–ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲ್ಲಿ 960 ಪುರುಷರು, 708 ಮಹಿಳೆಯರು, 1 ತೃತೀಯಲಿಂಗ ಸೇರಿ ಒಟ್ಟು 1,669 ಮತದಾರರಿದ್ದಾರೆ. 74- ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 912 ಪುರುಷರು, 722 ಮಹಿಳೆಯರು, 1 ತೃತೀಯಲಿಂಗ ಸೇರಿ ಒಟ್ಟು 1,635 ಮತದಾರರಿದ್ದಾರೆ.

75-ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 3,061 ಪುರುಷರು, 2,111 ಮಹಿಳೆಯರು ಸೇರಿ ಒಟ್ಟು 5,172 ಮತದಾರರಿದ್ದಾರೆ. 11-ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಾವೇರಿ ಜಿಲ್ಲೆಯ 83-ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2829 ಪುರುಷರು, 2284 ಮಹಿಳೆಯರು, ತೃತೀಯಲಿಂಗ 1 ಸೇರಿ ಒಟ್ಟು 5,114 ಮತದಾರರಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 14,772 ಪುರುಷರು, 11,012 ಮಹಿಳೆಯರು ಮತ್ತು ತೃತೀಯಲಿಂಗ 3 ಸೇರಿ ಒಟ್ಟು 25,787 ಮತದಾರರು ನೊಂದಾಯಿತರಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 18,626 ಹಿರಿಯ ಮತದಾರರು:
11-ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 18,626 ಜನ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ನೋಂದಣಿಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.

ಧಾರವಾಡ ಲೋಕಸಭಾ ಮತಕ್ಷೇತ್ರದ 69-ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 576 ಪುರುಷರು, 886 ಮಹಿಳೆಯರು ಸೇರಿ ಒಟ್ಟು 1,462 ಮತದಾರರು ನೋಂದಾಯಿಸಿಕೊಂಡಿದ್ದಾರೆ. 70-ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 475 ಪುರುಷರು, 637 ಮಹಿಳೆಯರು ಸೇರಿ ಒಟ್ಟು 1,112 ಮತದಾರರು ನೋಂದಾಯಿಸಿಕೊಂಡಿದ್ದಾರೆ. 71-ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,146 ಪುರುಷರು, 1421 ಮಹಿಳೆಯರು ಸೇರಿ ಒಟ್ಟು 2567 ಮತದಾರರು ನೋಂದಾಯಿಸಿಕೊಂಡಿದ್ದಾರೆ.

72-ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 834 ಪುರುಷರು, 1,210 ಮಹಿಳೆಯರು ಸೇರಿ ಒಟ್ಟು 2,044 ಮತದಾರರು ನೋಂದಾಯಿಸಿಕೊಂಡಿದ್ದಾರೆ. 73-ಹುಬ್ಬಳ್ಳಿ – ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,601 ಪುರುಷರು, 1,691 ಮಹಿಳೆಯರು ಸೇರಿ ಒಟ್ಟು 3,292 ಮತದಾರರು ನೋಂದಾಯಿಸಿಕೊಂಡಿದ್ದಾರೆ. 74-ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,911 ಪುರುಷರು, 1,878 ಮಹಿಳೆಯರು ಸೇರಿ ಒಟ್ಟು 3,789 ಮತದಾರರು ನೋಂದಾಯಿಸಿಕೊಂಡಿದ್ದಾರೆ. 75-ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 611 ಪುರುಷರು, 921 ಮಹಿಳೆಯರು ಸೇರಿ ಒಟ್ಟು 1,532 ಮತದಾರರು ನೋಂದಾಯಿಸಿಕೊಂಡಿದ್ದಾರೆ.

11-ಧಾರವಾಡ ಮತಕ್ಷೇತ್ರ ವಾಪಿಗೆ ಒಳಪಡುವ ಹಾವೇರಿ ಜಿಲ್ಲೆಯ 83-ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 1,100 ಪುರುಷರು, 1,728 ಮಹಿಳೆಯರು ಸೇರಿ ಒಟ್ಟು 2,828 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿದಲ್ಲಿ ಒಟ್ಟು 8,254 ಪುರುಷರು, 10,372 ಮಹಿಳೆಯರು ಸೇರಿ ಒಟ್ಟು 18,626 ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು