News Karnataka Kannada
Friday, May 10 2024
ಹುಬ್ಬಳ್ಳಿ-ಧಾರವಾಡ

ಚುನಾವಣಾ ನಿಯಮ ಪಾಲಿಸುವ ಮೂಲಕ ಸಹಕಾರ ನೀಡಿ: ದಿವ್ಯ ಪ್ರಭು

ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 12 ರಿಂದ 19 ರವರೆಗೆ ನಾಮಪತ್ರ ಸಲ್ಲಿಕೆ ನಡೆಯುತ್ತದೆ. ಅದಕ್ಕೆ ಸಂಬಂಧಪಟ್ಟಂತೆ ರಾಜಕೀಯ ಪಕ್ಷಗಳಿಗೆ ಅಗತ್ಯ ಮಾಹಿತಿ ನೀಡಲಾಗಿದ್ದು, ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ತಾವು ಪಾಲಿಸಬೇಕಾದ ಚುನಾವಣಾ ನಿಯಮಗಳು,  ಇವುಗಳನ್ನು ಪಾಲಿಸುವ ಮೂಲಕ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕೆಂದು  ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ  ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
Photo Credit : NewsKarnataka

ಧಾರವಾಡ: ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 12 ರಿಂದ 19 ರವರೆಗೆ ನಾಮಪತ್ರ ಸಲ್ಲಿಕೆ ನಡೆಯುತ್ತದೆ. ಅದಕ್ಕೆ ಸಂಬಂಧಪಟ್ಟಂತೆ ರಾಜಕೀಯ ಪಕ್ಷಗಳಿಗೆ ಅಗತ್ಯ ಮಾಹಿತಿ ನೀಡಲಾಗಿದ್ದು, ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ತಾವು ಪಾಲಿಸಬೇಕಾದ ಚುನಾವಣಾ ನಿಯಮಗಳು,  ಇವುಗಳನ್ನು ಪಾಲಿಸುವ ಮೂಲಕ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕೆಂದು  ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ  ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಅನುಸರಿಸಬೇಕಾದ ಚುನಾವಣಾ ನಿಯಮಗಳು ಮತ್ತು ನಾಮಪತ್ರ ಸಲ್ಲಿಕೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು. ಚುನಾವಣಾಧಿಕಾರಿಗಳ (ಡಿಸಿ) ಕಚೇರಿ ಸುತ್ತಮುತ್ತಲು 200 ಮೀಟರ್ ವ್ಯಾಪ್ತಿಯನ್ನು ಗಡಿ ಗುರುತಿಸಿ, 100 ಮೀಟರ್ ವ್ಯಾಪ್ತಿಯನ್ನು ನಿರ್ಭಂಧಿತ ಪ್ರದೇಶವನ್ನಾಗಿ ಗುರುತಿಸಲಾಗುತ್ತದೆ. 100 ಮೀಟರ್ ನಿರ್ಭಂಧಿತ ಪ್ರದೇಶದ ವ್ಯಾಪ್ತಿಯೋಳಗಡೆ ನಾಮಪತ್ರ ಸಲ್ಲಿಸಲು ಬರುವ ಮೂರು ವಾಹನಗಳಿಗೆ ಮಾತ್ರ ಅವಕಾಶವಿದ್ದು ಅಭ್ಯರ್ಥಿಗಳ ವಾಹನಗಳು ಕಡ್ಡಾಯವಾಗಿ ಅನುಮತಿ ಪಡೆದ ವಾಹನಗಳಾಗಿರಬೇಕು ಮತ್ತು ಈ ವಾಹನಗಳ ಮೇಲೆ ಅನುಮತಿ ಪತ್ರವನ್ನು ಲಗತ್ತಿಸಿರಬೇಕೆಂದು ಹೇಳಿದರು.

ನಾಮಪತ್ರ ಸಲ್ಲಿಸಲು ಬರುವಾಗ ಅಭ್ಯರ್ಥಿಗಳು ತರುವ ಮೂರು ವಾಹನಗಳಿಗೆ ಚುನಾವಣಾಧಿಕಾರಿಗಳ ಕಚೇರಿಯ ಮೇನ್ ಗೆಟ್‍ವರೆಗೆ ಮಾತ್ರ ಪ್ರವೇಶಕ್ಕಾಗಿ ಅನುಮತಿಸಲಾಗಿದೆ. ಚುನಾವಣಾಧಿಕಾರಿಗಳ ಕಚೇರಿಯ ಒಳಗಡೆ ಪ್ರವೇಶಿಸಲು ಅಭ್ಯರ್ಥಿಯೊಂದಿಗೆ ನಾಲ್ಕು ಜನರಿಗೆ ಮಾತ್ರ ಅವಕಾಶವಿರುತ್ತದೆ. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚಿನ ನಾಮಪತ್ರಗಳನ್ನು ಸಲ್ಲಿಸಲು ಇಚ್ಚಿಸಿದ್ದಲ್ಲಿ ಮುಂಚಿತವಾಗಿ ಸಲ್ಲಿಸುವ ನಾಮಪತ್ರಗಳ ಸಂಖ್ಯೆ ಹಾಗೂ ಅಭ್ಯರ್ಥಿಗಳೊಂದಿಗೆ ಬರುವವರ ಸಂಖ್ಯೆ ಮತ್ತು ವಿವರಗಳನ್ನು ಚುನಾವಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿ ಸಹಕರಿಸಲು ತಿಳಿಸಿದರು.

ನಾಮಪತ್ರ ಸಲ್ಲಿಕೆಗೆ ಆಗಮಿಸುವ ವೇಳೆಯಲ್ಲಿ ಡ್ರೋನ್ ಬಳಕೆಯ ಕುರಿತು ಪೊಲೀಸ್ ಇಲಾಖೆಯ ಪೂರ್ವನುಮತಿಯೊಂದಿಗೆ ಏಕಗವಾಕ್ಷಿ ಕೇಂದ್ರದಲ್ಲಿ ಮುಂಚಿತವಾಗಿ ಪರವಾಣಿಗೆ ಪಡೆದು ಉಪಯೋಗಿಸಬೇಕು. ಮತ್ತು ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸದಂತೆ ಚುನಾವಣಾ ಪ್ರಚಾರ ಕಾರ್ಯವನ್ನು ಧಾರ್ಮಿಕ ಸ್ಥಳಗಳಲ್ಲಿ ಕೈಗೊಳ್ಳದಂತೆ ನಿಗಾವಹಿಸಲು ಎಲ್ಲ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಅವರು ತಿಳಿಸಿದರು.

ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಪೂರ್ವಾನುಮತಿ ಪಡೆದು ಸಭೆ ಸಮಾರಂಭ ಹಾಗೂ ವಾಹನಗಳ ಬಳಕೆ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ,   ತಿದ್ದುಪಡಿ ತೆಗೆದುಹಾಕಲು ಮಾನ್ಯ ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದೆ. ನಮೂನೆ 7ರಲ್ಲಿ ಹೆಸರು ತೆಗೆದುಹಾಕಲು ಮತ್ತು ನಮೂನೆ 8ರಲ್ಲಿ ಹೆಸರು ತಿದ್ದುಪಡಿ, ಪಿಡಬ್ಲುಡಿ ಗುರುತಿಸುವಿಕೆ. ಎಪಿಕ್ ಕಾರ್ಡ್ ರಿಪ್ಲೆಸಮೆಂಟ್‍ಗೆ ಮಾರ್ಚ್ 16, 2024 ಕೊನೆಯ ದಿನಾಂಕವಾಗಿತ್ತು.

ಯಾವುದಾದರು ಮತದಾರರು ಬಿಟ್ಟು ಹೊಗಿರುವರೆ, ಬಿಟ್ಟು ಹೊಗಿರುವ ಬಗ್ಗೆ ನಿಮ್ಮ ಗಮನಕ್ಕೆ ಬಂದಿದೆಯೇ ಹಾಗೂ ಬಿಟ್ಟು ಹೋಗಿರುವ ಕುರಿತು ನಿಮ್ಮ ಗಮನಕ್ಕೆ ಬಂದಲ್ಲಿ ಬಿಎಲ್‍ಎಗಳ (ಬ್ಲಾಕ್ ಲೇವಲ್ ಎಜೆಂಟ್) ಮುಖಾಂತರ ಪರಿಶೀಲಿಸಿಕೊಂಡು ತಕ್ಷಣವೇ ನಮ್ಮ ಗಮನಕ್ಕೆ ತರುವಂತೆ ಹಾಗೂ ಅಂತಹ ಬಿಟ್ಟು ಹೊಗಿರುವ ಮತದಾರರನ್ನು ಮತದಾರರ ಯಾದಿಯಲ್ಲಿ, ನಮೂನೆ 6ರಲ್ಲಿ ಸಲ್ಲಿಸಿ, ಹೆಸರು ಸೇರ್ಪೆಡೆ ಮಾಡಲು ಎಪ್ರಿಲ್ ೦9 2024ರವರೆಗೆ ಅವಕಾಶವಿದ್ದು ಹೆಸರು ಸೇರ್ಪಡೆ ಮಾಡಬಹುದಾಗಿದೆ.

ಮಾರ್ಗಗಳು: ಕೆಸಿಡಿಯಿಂದ ಬರುವ ದಾರಿ, ಉಳವಿ ಚನ್ನಬಸವೇಶ್ವರ ಕಡೆಯಿಂದ ಬರುವ ದಾರಿ, ಕೇಂದ್ರ ಗ್ರಂಥಾಲಯ ಕಡೆಯಿಂದ ಬರುವ ದಾರಿ ಸೇರಿ ಒಟ್ಟು ಮೂರು ರಸ್ತೆಗಳಿಗೆ. ಈ ಮೂರು ರಸ್ತೆಗಳು ಸಹ 100 ಮೀಟರ್ ವ್ಯಾಪ್ತಿಯಲ್ಲಿ ಮೊದಲ ಬ್ಯಾರಿಕೆಡ್ ಹಾಕಲಾಗುತ್ತದೆ. ಮೆರವಣಿಗೆ ಮುಖಾಂತರ ನಾಮಿನೇಷನ್ ಮಾಡಲು ಬರುವಾಗ ಹೆಚ್ಚಿನ ಸಂಖ್ಯೆಯಲ್ಲಿ ಗಾಡಿಗಳು ಬರುತ್ತವೆ. ಇಲ್ಲಿ ರೋಡ್‍ಗಳು ಕಡಿಮೆ ಇರುವುದರಿಂದ ವಾಹನ ನಿಲ್ಲಿಸುವ ವ್ಯವಸ್ಥೆ, ಅಲ್ಲೇ ಹೊರಗಡೆ ಮಾಡಲಾಗುತ್ತದೆ. ಕೆ.ಸಿ.ಡಿ ಆವರಣದ ಮೈದಾನದಲ್ಲಿ, ಮಿನಿ ವಿಧಾನಸೌಧದ ಆವರಣ, ಉಳವಿ ಬಸವೇಶ್ವರ ದೇವಸ್ಥಾನದ ಆವರಣ, ಕೇಂದ್ರ ಗ್ರಂಥಾಲಯದ ಹತ್ತಿರ ಮತ್ತು ಹೆಡ್‍ಪೋಸ್ಟ್ ಹತ್ತಿರದಲ್ಲಿ ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದರು.

ಮಹಾನಗರ ಪೋಲಿಸ ಆಯುಕ್ತೆ ರೇಣುಕಾ ಸುಕುಮಾರ ಅವರು ಮಾತನಾಡಿ,  ಚುನಾವಣಾ ನೀತಿ ಸಂಹಿತೆ, ಆಯೋಗದ ನಿಯಮಗಳ ಪ್ರಕಾರ ಮೂರು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಮೂರು ಗಾಡಿಗಳು ಹೊರತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ವ್ಯಾಪ್ತಿಯ 100 ಮೀಟರ್ ಒಳಗಡೆ ಬೇರೆ ಯಾವುದೇ ವಾಹನಗಳಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಎಸಿಪಿ ಬಿ.ಎಸ್.ಬಸವರಾಜ, ನೋಡಲ್ ಅಧಿಕಾರಿ ಅಜಿಜ ದೇಸಾಯಿ, ಸಿಪಿಐ ದಯಾನಂದ ಸೇರಿಂತೆ ವಿವಿಧ ರಾಕೀಯ ಪಕ್ಷಗಳ ಪ್ರತಿನಿಧಿಗಳು, ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು