News Karnataka Kannada
Thursday, May 09 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: 18 ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದಿದ್ದಾರೆ- ಗುರುದತ್ತ ಹೆಗಡೆ

Dharwad: 18 candidates have withdrawn their candidature: Gurudatta Hegde
Photo Credit : News Kannada

ಧಾರವಾಡ: ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಕ್ರಮಬದ್ಧವಾಗಿದ್ದ ತಮ್ಮ ನಾಮಪತ್ರಗಳನ್ನು ಆಸಕ್ತ ಅಭ್ಯರ್ಥಿಗಳು ಹಿಂಪಡೆಯಲು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ, ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳ ಒಟ್ಟು 18 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು ಮತ್ತು ಒಟ್ಟು 92 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಿಗೆ ಒಟ್ಟು 182 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಏ.21 ರಂದು ನಾಮಪತ್ರ ಪರಿಶೀಲನೆಯ ನಂತರ ಅದರಲ್ಲಿನ 30 ನಾಮಪತ್ರಗಳು ತಿರಸ್ಕೃತಗೊಂಡು, 152 ನಾಮಪತ್ರಗಳು ಕ್ರಮಬದ್ಧವಾಗಿ ಹಾಗೂ 110 ಅಭ್ಯರ್ಥಿಗಳು ಉಳಿದಿದ್ದರು.

ಒಟ್ಟು 18 ನಾಮಪತ್ರಗಳನ್ನು ಹಿಂಪಡೆಯಲಾಗಿದ್ದು ಅಂತಿಮವಾಗಿ 92 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನವಲಗುಂದ-69 ವಿಧಾನಸಭಾ ಮತಕ್ಷೇತ್ರ : ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿವಾನಂದ ಬಸಪ್ಪ ಕರಿಗಾರ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಹಣಮಂತಪ್ಪ ಯಲ್ಲಪ್ಪ ಮೇಗಳಮನಿ (ಬಹುಜನ ಸಮಾಜ ಪಕ್ಷ), ವಿಜಯಕುಮಾರ ಸಂಗಪ್ಪ (ಆಮ್ ಆದ್ಮಿ ಪಕ್ಷ), ಶಂಕರ ಬಿ. ಪಾಟೀಲ ಮುನೇನಕೊಪ್ಪ (ಭಾಜಪ), ಎನ್.ಹೆಚ್. ಕೋನರೆಡ್ಡಿ (ಕಾಂಗ್ರೆಸ್), ಗಡ್ಡಿ ಕಲ್ಲಪ್ಪ ನಾಗಪ್ಪ (ಜೆಡಿಎಸ್), ಮೈಲಾರಪ್ಪ ಭರಮಪ್ಪ ಚವಡಿ (ಕರ್ನಾಟಕ ರಾಷ್ಟ್ರ ಸಮಿತಿ), ಮೋಹನ ದೇವರಡ್ಡಿ ಮಾಸ್ತಿ (ಉತ್ತಮ ಪ್ರಜಾಕೀಯ ಪಕ್ಷ), ಅಜಯ್ ಮಲ್ಲಿಕಾರ್ಜುನ ಹೂಗಾರ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಮಾಬುಸಾಬ ಮಕ್ತುಮಸಾಬ ಯರಗುಪ್ಪಿ (ಪಕ್ಷೇತರ), ಅಂಬಲಿ ಶಂಕ್ರಪ್ಪ ರುದ್ರಪ್ಪ (ಪಕ್ಷೇತರ), ಮಲ್ಲಿಕಾರ್ಜುನಗೌಡ ಗಿರಿಯಪ್ಪಗೌಡ ಬಾಳನಗೌಡ್ರ (ಪಕ್ಷೇತರ), ಮಲ್ಲಪ್ಪ ಕೃಷ್ಣಪ್ಪ ಹೆಬಸೂರ (ಪಕ್ಷೇತರ), ವಿನಯಕುಮಾರ ಪರಪ್ಪ ಮ್ಯಾಗೇರಿ (ಪಕ್ಷೇತರ) ಸೇರಿದಂತೆ ಒಟ್ಟು 13 ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.

ಕುಂದಗೋಳ-70 ವಿಧಾನಸಭಾ ಮತಕ್ಷೇತ್ರ : ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಶಿವಾನಂದ ಹನುಮಂತಪ್ಪ ಮುತ್ತಣ್ಣವರ (ಸ್ವತಂತ್ರ ಅಭ್ಯರ್ಥಿ), ನಬಿಸಾಬ ಫಕ್ಕೀರಸಾಬ ನದಾಫ (ಸ್ವತಂತ್ರ ಅಭ್ಯರ್ಥಿ), ಗುರುನಾಥ ದೇವಪ್ಪ ಘೋರ್ಪಡೆ (ಸ್ವತಂತ್ರ ಅಭ್ಯರ್ಥಿ), ಶರಣಪ್ಪ ನಿಂಗಪ್ಪ ಕುರಿಯವರ (ಸ್ವತಂತ್ರ ಅಭ್ಯರ್ಥಿ), ಬಸವರಾಜ ನಿಂಗಪ್ಪ ರೇವಡೆನವರ (ಸ್ವತಂತ್ರ ಅಭ್ಯರ್ಥಿ), ಗೌಡಪ್ಪಗೌಡ ಚನ್ನಬಸನಗೌಡ ಪಾಟೀಲ್ ಅದರಗುಂಚಿ (ಸ್ವತಂತ್ರ ಅಭ್ಯರ್ಥಿ), ಕಲ್ಲಪ್ಪ ಚನ್ನಪ್ಪ ಬಿಸನಳ್ಳಿ (ಸ್ವತಂತ್ರ ಅಭ್ಯರ್ಥಿ) ಸೇರಿದಂತೆ 7 ಜನ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಎಂ.ಆರ್. ಪಾಟೀಲ್ (ಬಿಜೆಪಿ), ನಿರಂಜನಯ್ಯ ರುದ್ರಯ್ಯ ಮಣಕಟ್ಟಿಮಠ (ಆಮ್ ಆದ್ಮಿ ಪಾರ್ಟಿ), ಹಜರತಅಲಿ ಶೇಖ ಜೋಡಮನಿ (ಜೆ.ಡಿ.ಎಸ್.), ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ (ಕಾಂಗ್ರೆಸ್), ಸುರೇಶ ಕುರಬಗಟ್ಟಿ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಯಲ್ಲಪ್ಪ ಹಣಮಪ್ಪ ದಬಗೊಂದಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಚಿಕ್ಕನಗೌಡ್ರ ಸಿದ್ದನಗೌಡ ಈಶ್ವರಗೌಡ (ಸ್ವತಂತ್ರ ಅಭ್ಯರ್ಥಿ), ಶಿವನಗೌಡ ಬಸನಗೌಡ ಕುರಟ್ಟಿ (ಸ್ವತಂತ್ರ ಅಭ್ಯರ್ಥಿ), ಮಲ್ಲಿಕಾರ್ಜುನ ಕಲ್ಲಪ್ಪ ತೋಟಗೇರಿ (ಸ್ವತಂತ್ರ ಅಭ್ಯರ್ಥಿ), ವಿರುಪಾಕ್ಷಗೌಡ ನಾಗಣಗೌಡ ಪಕ್ಕಿರಗೌಡ್ರ (ಸ್ವತಂತ್ರ ಅಭ್ಯರ್ಥಿ), ಮಹ್ಮದ ಹನೀಫ ರಾಜೇಸಾಬ ಕರಡಿ (ಸ್ವತಂತ್ರ ಅಭ್ಯರ್ಥಿ), ಚಾಂದಪೀರ ಹಜರೆಸಾಬ ಬಂಕಾಪುರ (ಸ್ವತಂತ್ರ ಅಭ್ಯರ್ಥಿ), ಗಂಗಾಧರ ಶಿವರಡ್ಡಿ ಖಂಡೇಗೌಡ್ರು (ಸ್ವತಂತ್ರ ಅಭ್ಯರ್ಥಿ), ಕುತ್ಬುದ್ದಿನ ಇಮಾಮಸಾಬ ಬೆಳಗಲಿ (ಸ್ವತಂತ್ರ ಅಭ್ಯರ್ಥಿ) ಸೇರಿದಂತೆ ಒಟ್ಟು 14 ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.

ಧಾರವಾಡ 71 ರ ವಿಧಾನಸಭಾ ಮತ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ತವಣಪ್ಪ ಪಾಯಪ್ಪ ಅಷ್ಟಗಿ (ಪಕ್ಷೇತರ), ಶಿವಲೀಲಾ ವಿನಯ ಕುಲಕರ್ಣಿ (ಪಕ್ಷೇತರ), ಬಸವರಾಜ ಹನುಮಂತಪ್ಪ ಕೊರವರ (ಪಕ್ಷೇತರ), ಬಸಯ್ಯ ತಿರಕಯ್ಯಾ ಹಿರೇಮಠ (ಪಕ್ಷೇತರ) ಸೇರಿದಂತೆ 4 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಅಮೃತ ಅಯ್ಯಪ್ಪ ದೇಸಾಯಿ (ಭಾಜಪ), ಮಂಜುನಾಥ ಲಕ್ಷ್ಮಪ್ಪ ಹಗೇದಾರ (ಜೆಡಿಎಸ್), ವಿನಯ ರಾಜಶೇಖರಪ್ಪ ಕುಲಕರ್ಣಿ (ಕಾಂಗ್ರೆಸ್), ಪ್ರವೀಣ್ ಸಂಗನಗೌಡ ಪಾಟೀಲ್ (ಉತ್ತಮ ಪ್ರಜಾಕೀಯ ಪಕ್ಷ), ಸತ್ಯವ್ವ ತಿರಕಪ್ಪ ಜಮನಾಳ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಸಿದ್ದಲಿಂಗೇಶ್ವರ ಬಸವರಾಜ ಬಾಗೂರ, (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಮಧುಲತಾ ಭವಾನಿಶಂಕರ ಗೌಡರ, (ಸೋಷಲಿಸ್ಟ್ ಯುನಿಟಿ ಸೆಂಟರ್ ಆಪ್ ಇಂಡಿಯಾ) (ಕಮ್ಯುನಿಸ್ಟ್), ಮಂಜುನಾಥ ಹನುಮಂತಪ್ಪ ಹರಿಜನ (ಪಕ್ಷೇತರ), ರಾಜಶೇಖರಯ್ಯ ವಿರೂಪಾಕ್ಷಯ್ಯ ಕಂತಿಮಠ (ಪಕ್ಷೇತರ) ಶಕೀಲ ಅಬ್ದುಲಸತ್ತಾರ ದೊಡವಾಡ (ಪಕ್ಷೇತರ) ಶಶಿಕಿರಣ ಬಸವರಾಜ ನಡಕಟ್ಟಿ (ಪಕ್ಷೇತರ) ಸೇರಿದಂತೆ ಒಟ್ಟು 11 ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೂರ್ವ-72 ರ ವಿಧಾನ ಸಭಾ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಬಸವರಾಜ ಗಂಗಪ್ಪ ಅಮ್ಮಿನಭಾವಿ (ಪಕ್ಷೇತರ), ವೆಂಕಟೇಶ ತಿಪ್ಪಣ್ಣ ಮೆಸ್ತ್ರಿ (ಪಕ್ಷೇತರ) ಸೇರಿದಂತೆ ಇಬ್ಬರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ವೀರಭದ್ರಪ್ಪ ಹುಲಗಪ್ಪ ಹಾಲಹರವಿ (ಜೆಡಿಎಸ್), ಬಸವರಾಜ ಶಿವಶಂಕರಪ್ಪ ತೇರದಾಳ (ಆಮ್ ಆದ್ಮಿ ಪಾರ್ಟಿ), ಪ್ರಸಾದ ಅಬ್ಬಯ್ಯ (ಕಾಂಗ್ರೆಸ್), ಡಾ.ಎಸ್ ಕ್ರಾಂತಿ ಕಿರಣ (ಭಾಜಪ), ಚಂದ್ರಕಾಂತ ಮಂಜುನಾಥ ಅಂಜಗಿ (ಕರ್ನಾಟಕ ರಾಷ್ಟ್ರೀಯ ಸಮಿತಿ), ಶೋಭಾ ಕದರೆಪ್ಪ ಪಾಲವೈ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಲಕ್ಷಣ ಪರಶುರಾಮ ಮೊರಬ (ಹಿಂದೂಸ್ತಾನ ಜನತಾ ಪಾರ್ಟಿ ಸೆಕ್ಯೂಲರ), ದುರ್ಗಪ್ಪ ಕಾಶಪ್ಪ ಬಿಜವಾಡ (ಎ.ಐ.ಎಮ್.ಐ.ಎಮ್), ವಿಜಯ ಮಹಾದೇವಪ್ಪ ಗುಂಟ್ರಾಳ (ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ), ದೇವೆಂದ್ರ ಬಸಪ್ಪ ಲಿಂಗದಾಳ (ಪಕ್ಷೇತರ), ವೆಂಕಪ್ಪ ಪಕ್ಕೀರಪ್ಪ ಸಿದ್ಧನಾಥ (ಪಕ್ಷೇತರ) ಸೇರಿದಂತೆ ಒಟ್ಟು 11 ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ-73 ರ ವಿಧಾನ ಸಭಾ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಅಲ್ತಾಫ್‍ನವಾಜ್ ಮೊಹಮ್ಮದ ಸಾಹೇಬ ಕಿತ್ತೂರ (ಪಕ್ಷೇತರ), ಹನುಮಂತಸಾ ಚಂದ್ರಕಾಂತಸ ನಿರಂಜನ (ಪಕ್ಷೇತರ) ಸೇರಿದಂತೆ ಇಬ್ಬರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಜಗದೀಶ ಶಿವಪ್ಪ ಶೆಟ್ಟರ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಮಹೇಶ್ ಚನ್ನವೀರಪ್ಪ ಟೆಂಗಿನಕಾಯಿ (ಭಾಜಪ), ರೇವಣಸಿದ್ದಪ್ಪ ಮಡಿವಾಳಪ್ಪ ಹೊಸಮನಿ (ಬಹುಜನ ಸಮಾಜ ಪಕ್ಷ), ವಿಕಾಸ ಬಸವಂತಪ್ಪ ಸೊಪ್ಪಿನ (ಆಮ್ ಆದ್ಮಿ ಪಕ್ಷ), ಸಿದ್ಧಲಿಂಗೇಶ್ವರಗೌಡ ಬಸನಗೌಡ ಮಹಾಂತಓಡೆಯರ (ಜೆಡಿಎಸ್), ದಾಯಪ್ಪಗೌಡ ಕಲ್ಲನಗೌಡ ಶಿವನಗೌಡ (ಉತ್ತಮ ಪ್ರಜಾಕೀಯ ಪಕ್ಷ), ಮೇಘರಾಜ ಮರೆಪ್ಪ ಹಿರೇಮನಿ (ಲೋಕಶಕ್ತಿ), ರಾಘವೇಂದ್ರ ಪ್ರಕಾಶ ಕಠಾರೆ (ಹಿಂದುಸ್ಥಾನ ಜನತಾ ಪಕ್ಷ), ಶಿವಪುತ್ರಪ್ಪ ಶಾಮರಾವ್ ಪಾಟೀಲ (ಕರ್ನಾಟಕ ಜನಸೇವೆ ಪಕ್ಷ), ಶೈಲೇಂದ್ರಕುಮಾರ ಚಂದ್ರಕಾಂತ ಪಾಟೀಲ (ಕರ್ನಾಟಕ ರಾಷ್ಟ್ರೀಯ ಪಕ್ಷ), ಟಾಕಪ್ಪ ಯಲ್ಲಪ್ಪ ಕಲಾಲ (ಪಕ್ಷೇತರ), ಮೌಲಾಲಿ ರಾಜೇಸಾಬ ಸಂಶಿ (ಪಕ್ಷೇತರ), ರಾಜು ಅನಂತಸಾ ನಾಯಕವಾಡಿ (ಪಕ್ಷೇತರ), ಸಾಬಜಿ ಸ್ವಾಮಿಜಿ ಬಡಂಗಕರ (ಪಕ್ಷೇತರ), ಸೌಲಮ ಸೊಲೊಮನ ಜೋಸೆಫ್ (ಪಕ್ಷೇತರ), ಹೇಮರಾಜ ಅಡಿವೆಪ್ಪ ಬಡ್ನಿ (ಪಕ್ಷೇತರ) ಸೇರಿದಂತೆ ಒಟ್ಟು 16 ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ – 74 ರ ವಿಧಾನಸಭಾ ಕ್ಷೇತ್ರ: ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಜಶೇಖರ್ ವಿರುಪಾಕ್ಷಯ್ಯ ಕಂತಿಮಠ (ಪಕ್ಷೇತರ) ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಅರವಿಂದ ಚಂದ್ರಕಾಂತ ಬೆಲ್ಲದ, (ಭಾಜಪ), ಅರವಿಂದ ಮಾಲತೇಶ ಮುಗದೂರ (ಆಮ ಆದ್ಮಿ ಪಾರ್ಟಿ), ಗುರುರಾಜ ಇಷ್ಟಲಿಂಗಪ್ಪ ಹುಣಸಿಮರದ (ಜೆಡಿಎಸ್), ದೀಪಕ ಶಂಕರರಾವ್ ಚಿಂಚೋರೆ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಮನ್ನಾರಿ ಮಧುಸೂದನ್ ವಾದಿರಾಜ್ (ಆಲ್ ಇಂಡಿಯಾ ಹಿಂದೂಸ್ತಾನ್ ಕಾಂಗ್ರೆಸ್ ಪಾರ್ಟಿ), ಮಲ್ಲಿಕಾರ್ಜುನ ದೇವೇಂದ್ರಪ್ಪ ರೊಟ್ಟಿಗವಾಡ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ವಿನೋದ್ ದಶರಥ ಘೋಡಕೆ (ಪೆÇ್ರಟೆಸ್ಟ್ ಬ್ಲಾಕ್ ಇಂಡಿಯಾ), ಸರೋಜಾ ಪಕೀರಪ್ಪ ನಾಗೇಂದ್ರಗಡ (ಇಂಡಿಯನ್ ಮೂಮೆಂಟ್ ಪಾರ್ಟಿ), ಸಂತೋμï ವಿಠಲ ರಾವ್ ನಂದೂರ (ಉತ್ತಮ ಪ್ರಜಾಕೀಯ ಪಕ್ಷ), ಬಸವರಾಜ್ ಶಿವಪ್ಪ ಮಲಕಾರಿ (ಪಕ್ಷೇತರ), ಬಾನುಬಿ ಶೇಖ ಖಾಸಿಮ ಸಾಬ್ ಉರ್ಫ್ ಹೊಸಮನಿ (ಪಕ್ಷೇತರ), ಮಹಮ್ಮದ್ ಇಸ್ಮಾಯಿಲ್ ಹುಸ್ನೂದ್ದೀನ್ ಮುಕ್ತಿ (ಪಕ್ಷೇತರ), ರಾಜೇಸಾಬ್ ಮೌಲಾಸಾಬ್ ದರಗಾದ (ಪಕ್ಷೇತರ), ಶಿದರಾಯ ಮುರಗೆಪ್ಪ ಕೆಂಚಣ್ಣವರ (ಪಕ್ಷೇತರ), ಶಿವರಾಜ್ ರಾಮಣ್ಣ ಕೊರಸರ (ಪಕ್ಷೇತರ) ಸೇರಿದಂತೆ ಒಟ್ಟು 15 ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ.

ಕಲಘಟಗಿ-75 ವಿಧಾನಸಭಾ ಮತಕ್ಷೇತ್ರ : ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಾಗರಾಜ ಗದಿಗೆಪ್ಪ ಗಟಿಗೆಣ್ಣವರ (ಪಕ್ಷೇತರ) ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಛಬ್ಬಿ ನಾಗರಾಜ ಗುರುಸಿದ್ದಪ್ಪ (ಭಾಜಪ), ಮಂಜುನಾಥ ಗಂಗಪ್ಪ ಜಕ್ಕಣ್ಣವರ (ಆಮ್ ಆದ್ಮಿ ಪಕ್ಷ), ವೀರಪ್ಪ ಬಸಪ್ಪ ಶೀಗಿಗಟ್ಟಿ (ಜಾತ್ಯಾತೀತ ಜನತಾದಳ), ಸಂತೋಷ ಎಸ್. ಲಾಡ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಚಂದ್ರಶೇಖರ ಶಂಭಯ್ಯ ಮಠದ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಬಸವಲಿಂಗಪ್ಪ ಈರಪ್ಪ ಬುಗಡಿ (ಉತ್ತಮ ಪ್ರಜಾಕೀಯ ಪಕ್ಷ), ಮಲ್ಲಿಕಾ ಬಸವರಾಜ ದೊಡಮನಿ (ಪ್ರೌಟಿಸ್ಟ್ ಬ್ಲಾಕ್ ಇಂಡಿಯಾ), ಮಹಬೂಬಅಲಿ ಮಹಮ್ಮದಅಲಿ ಬುಡನಖಾನ (ಇಂಡಿಯನ್ ಮೂವಮೆಂಟ್ ಪಾರ್ಟಿ), ಬಸವರಾಜ ಚನ್ನಪ್ಪ ಗೊಡ್ಡೆಮ್ಮಿ (ಪಕ್ಷೇತರ), ಬಸವರಾಜ ಉಳವಪ್ಪ ದೊಡಮನಿ (ಪಕ್ಷೇತರ), ಬಸವರಾಜ ಗಂಗಪ್ಪ ಸಂಗಣ್ಣವರ (ಪಕ್ಷೇತರ), ಶಂಕರ ನಿಂಗಪ್ಪ ಹುದ್ದಾರ (ಪಕ್ಷೇತರ) ಸೇರಿದಂತೆ ಒಟ್ಟು 12 ಜನ ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು