ಹುಬ್ಬಳ್ಳಿ: 1 ರಿಂದ 6ನೇ ತರಗತಿಯ ಶಾಲೆಗಳನ್ನು ಆರಂಭ ಮಾಡಬೇಕು. ಶಾಲೆ ಆರಂಭ ಮಾಡುವ ಅವಶ್ಯಕತೆ ಇದೆ. ನಾನು ಈ ಹಿಂದೆಯೇ ಶಾಲೆ ಆರಂಭ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
ಈತನಕ ಸರ್ಕಾರಿ ಮನೆ ನೀಡದಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರಿ ಮನೆ ಕೊಡುವಂತೆ ನಾನು ರಾಜ್ಯ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ನಾನು ಇನ್ನು ಮುಂದೆ ಮನೆ ಕೇಳುವುದಿಲ್ಲ ಹೇಳಿದರು.
ಇಂದು ಮತ್ತೆ ಸರ್ಕಾರಕ್ಕೆ ಪತ್ರ ಬರೆಯುವೆ. ಇದು ನನ್ನ ಕೊನೆಯ ಪತ್ರ. ಮನೆ ನೀಡುವ ವಿಚಾರವಾಗಿ ಸರ್ಕಾರ ವಿಳಂಬ ಮಾಡುತ್ತಿರುವುದರ ವಿರುದ್ಧ ಬೇಸರವಾಗಿದೆ ಎಂದರು.