ಬೆಂಗಳೂರು: 2023ಕ್ಕೆ ಜೆಡಿಎಸ್ ಪಕ್ಷದ ಗುರಿ ಏನಿದ್ದರೂ ‘123’ ಮಾತ್ರ. 2023ರಲ್ಲಿ ರಾಜ್ಯದಲ್ಲಿ 2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ರಾಷ್ಟ್ರೀಯ ಪಕ್ಷಗಳಿಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕಂಡರೆ ಭಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತಿದ್ದ ಅವರು ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಶಿಸಿಹೋಗಿದೆ ಎನ್ನುವವರಿಗೆ ಮುಂದಿನ ರಾಜ್ಯ ರಾಜಕಾರಣ ಜೆಡಿಎಸ್ನಿಂದಲೇ ಉಳಿಯಲಿದೆ ಎಂದು ಉತ್ತರ ಕೊಡಬಯಸುತ್ತೇನೆ. ರಾಜ್ಯದ ಮುಂದಿನ ರಾಜಕಾರಣ ಈಗಲೂ ಜೆಡಿಎಸ್ ಪಕ್ಷದಿಂದಲೇ ಉಳಿಯಲಿದೆ ಎಂಬ ಭಾವನೆ ರಾಜ್ಯದ ಜನರಲ್ಲಿದೆ ಅವರು ಹೇಳಿದರು.
2023 ರ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದೇ ಗುರಿ ; ಹೆಚ್ ಡಿ ಕುಮಾರ ಸ್ವಾಮಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.