News Karnataka Kannada
Sunday, May 12 2024
ಕರ್ನಾಟಕ

ಹಶಿಶ್ ತೈಲ ಕಳ್ಳಸಾಗಾಣೆ: ಇಬ್ಬರ ಬಂಧನ

Photo Credit :

ಹಶಿಶ್ ತೈಲ ಕಳ್ಳಸಾಗಾಣೆ: ಇಬ್ಬರ ಬಂಧನ

ಕಾಸರಗೋಡು: ವಿದೇಶಕ್ಕೆ ಕೊಂಡೊಯ್ಯಲು ತಂಡವೊಂದಕ್ಕೆ ಹಸ್ತಾಂತರಿಸಲು ತರಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಹಶಿಶ್ ತೈಲವನ್ನು ಕಾಸರಗೋಡು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಕಾಸರಗೋಡು ನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸಿ, ತೈಲವನ್ನು ವಶಪಡಿಸಿಕೊಂಡಿದೆ.

ಚಂದ್ರಗಿರಿ ಹೊಳೆ ಚೆಮ್ನಾಡ್ ನ ಸೇತುವೆ ಕೆಳಗಿನಿಂದ ಮಾದಕ ವಸ್ತು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಯಿತು. ಬಂಧಿತರನ್ನು ನಾಯಮ್ಮರಮೂಲೆ ಚಾಲದ ಟಯರ್ ಫೈಝಲ್ (31) ಮತ್ತು ಕುಂಬಳೆ ಶೇಡಿಕ್ಕಾನದ ಮುಸ್ತಫಾ(23) ಎಂದು ಗುರುತಿಸಲಾಗಿದೆ.

ಕಾಸರಗೋಡು ನಗರ ಠಾಣಾ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಶನಿವಾರ ಮಧ್ಯಾಹ್ನ ದಾಳಿ ನಡೆಸಿದ್ದು, ಚೆಮ್ನಾಡ್ ಸೇತುವೆ ಕೆಳಗಿನ ನಿರ್ಜನ ಸ್ಥಳಕ್ಕೆ ಹಶಿಶ್ ತೈಲವನ್ನು ತಂಡವೊಂದಕ್ಕೆ ಹಸ್ತಾಂತರಿಸಲು ಇಬ್ಬರು ತಲಪಿದ್ದರು. ಸ್ಥಳಕ್ಕೆ ತಲಪಿದ ಪೊಲೀಸರು ಇಬ್ಬರನ್ನು ಬಂಧಿಸಲು ಯಶಸ್ವಿಯಾದರು. ಇವರ ಬಳಿ ಇದ್ದ 450 ಗ್ರಾಂ ಹಶಿಶ್ ತೈಲವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು ಒಂಭತ್ತು ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ತಂಡದಲ್ಲಿ ಇನ್ನಷ್ಟು ಮಂದಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಫೈಝಲ್ ಈ ಹಿಂದೆ ಗಾಂಜಾ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು