ನವದೆಹಲಿ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಸೀಮಾಂಚಲ್ ಎಕ್ ಪ್ರೆಸ್ ರೈಲಿನ ಹನ್ನೊಂದು ಬೋಗಿಗಳು ಹಳಿ ತಪ್ಪಿ ಸಂಭವಿಸಿರುವ ರೈಲು ದುರಂತದಲ್ಲಿ ಆರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಹದೈ ಬುಜರ್ಗ್ ಪ್ರದೇಶದಲ್ಲಿ ಭಾನುವಾರ ಬೆಳಗ್ಗಿನ ಜಾವ 3.58ಕ್ಕೆ ರೈಲು ಹಳಿ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಅಪಘಾತಕ್ಕೆ ಒಂದು ಸಾಮಾನ್ಯ ಬೋಗಿ, ಎಸಿ ಬೋಗಿ ಬಿ3, ಸ್ಲೀಪರ್ ಕೋಚ್ ಗಳಾದ ಎಸ್ 9, ಎಸ್ 9, ಎಸ್ 10 ಹಾಗೂ ಇತರೆ ಆರು ಬೋಗಿಗಳು ಹಳಿ ತಪ್ಪಿದೆ.